ಚೆನ್ನೈ: ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ವಿಜಯ್ ಕೊನೆಯ ಬಾರಿಗೆ ಭಾರತಕ್ಕಾಗಿ ಡಿಸೆಂಬರ್ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. 2015 ರಿಂದ ಏಕದಿನ ಅಥವಾ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿಲ್ಲ. ಅವರ ಐಪಿಎಲ್ ವೃತ್ತಿ ಜೀವನವು ಬಹುತೇಕ ಅಂತ್ಯಗೊಂಡಿದೆ. ವಿಜಯ್ ಕೊನೆಯ ಬಾರಿಗೆ ಸೆಪ್ಟೆಂಬರ್ 2020 ರಲ್ಲಿ ಐಪಿಎಲ್ ಪಂದ್ಯವನ್ನು ಆಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ವಿಜಯ್ ಕ್ರಿಕೆಟ್ ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಸಾಪ್ತಾಹಿಕವೊಂದಕ್ಕೆ ಮಾತನಾಡಿದ ಮುರಳಿ ವಿಜಯ್, ಬಿಸಿಸಿಐಯೊಂದಿಗೆ ತಮ್ಮ ಸಂಬಂಧ ಮುಗಿದಿದೆ ಎನ್ನುವ ರೀತಿ ಮಾತನಾಡಿದ್ದಾರೆ.
ಇದನ್ನೂ ಓದಿ:ದೇವರ ಹುಡುಕಾಟದಲ್ಲಿ ಗುರು-ಶಿಷ್ಯರ ಪಾತ್ರ ಮಹತ್ವವಾದದ್ದು: ಕೋಡಿಮಠದ ಶ್ರೀಗಳು
” ಬಿಸಿಸಿಐಯೊಂದಿಗೆ ತಮ್ಮ ಸಂಬಂಧ ಮುಗಿದಿದೆ. ಮತ್ತು ವಿದೇಶದಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದೇನೆ. ನಾನು ಇನ್ನೂ ಸ್ವಲ್ಪ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಬಯಸುತ್ತೇನೆ” ಎಂದು ವಿಜಯ್ ಹೇಳಿದರು.
Related Articles
30 ವರ್ಷದ ಕ್ರಿಕೆಟಿಗನನ್ನು 80 ವರ್ಷವಾದವರಂತೆ ಬಿಸಿಸಿಐ ನೋಡುತ್ತದೆ. ನಾನು ಇನ್ನೂ ಉತ್ತಮ ಕ್ರಿಕೆಟ್ ಆಡಬಲ್ಲೆ. ಆದರೆ ಬೇರೆಡೆ ಅವಕಾಶಗಳನ್ನು ಹುಡುಕದೆ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಹೇಳಿದರು. ಈಗ ವಿದೇಶದಲ್ಲಿ ಅವಕಾಶಗಳು ಹುಡುಕಿಕೊಂಡು ಬರಬಹುದು ಎಂಬ ಸುಳಿವು ನೀಡಿದ್ದಾರೆ.
ಮುರಳಿ ವಿಜಯ್ ಭಾರತಕ್ಕಾಗಿ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 38.39 ಸರಾಸರಿಯಲ್ಲಿ 3982 ರನ್ ಗಳಿಸಿದ್ದಾರೆ. ಅವರು 12 ಟೆಸ್ಟ್ ಶತಕಗಳು ಮತ್ತು 15 ಅರ್ಧ ಶತಕಗಳನ್ನು ಬಾರಿಸಿದ್ದಾರೆ.