Advertisement

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

06:16 PM Jan 24, 2022 | Team Udayavani |

ಬೆಂಗಳೂರು : ಸಂಪುಟ ಪುನಾರಚನೆ ಶೀಘ್ರವಾಗಿ ಆಗಬೇಕು, ವಾರದೊಳಗೆ ಮಾಡಿದರೆ ಒಳ್ಳೆಯದು ಎಂದು ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸನ ಗೌಡ ಪಾಟೀಲ್ ಬಿಜೆಪಿಗೆ ಸೋಮವಾರ ಮತ್ತೆ ಸವಾಲು ಎಸೆದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ,”ಸಂಪುಟ ನಂತರ ಪುನಾರಚನೆಯಾದರೆ ಉಪಯೋಗ ಇಲ್ಲ.ಯಾಕೆಂದರೆ , ಉತ್ತರಪ್ರದೇಶದಲ್ಲಿ ಆದಂತೆ ಅಧಿಕಾರ ಅನುಭವಿಸಿದ ನಂತರ ಮೌರ್ಯ ರೀತಿ ಪಕ್ಷ ಬಿಟ್ಟು,ಜಾತ್ರೆ ಮಾಡ್ಕೊಂಡು ಹೋಗ್ತಾರೆ.ಈಗಾಗಲೇ ಡಿ ಕೆ ಶಿವಕುಮಾರ್ ಜೊತೆಗೆ ಸೀಟ್ ಬಗ್ಗೆ ಮಾತಾಡಿಕೊಂಡಿದ್ದು, ಅದರ ಬಗ್ಗೆ ನಮಗೆ ಮಾಹಿತಿ ಇದೆ.ಚುನಾವಣೆ ಘೋಷಣೆ ಆದ ಬಳಿಕ ಸಚಿವ ಸ್ಥಾನ ಮತ್ತು ಬಿಜೆಪಿ ಗೆ ರಾಜೀನಾಮೆ ಕೊಟ್ಟು ಹೋಗುತ್ತಾರೆ.ನಂತರ ಯತ್ನಾಳ ಬೇಕು, ಜಾರಕಿಹೊಳಿ‌ ಬೇಕು ಅಂತ ಹುಡುಕಿದರೆ ಆಗುವುದಿಲ್ಲಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು.ಸಂಪುಟ ಪುನಾರಚನೆ ಬೇಗ ಆಗಬೇಕು” ಎಂದರು.

ರೇಣುಕಾಚಾರ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನಾನು ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರೋಧಿ. ನಾನೇನು ಡಿಕೆಶಿ, ಸಿದ್ದರಾಮಯ್ಯ ಭೇಟಿ ಮಾಡಿಲ್ಲ.ಜಮೀರ್ ಅಹಮದ್ ಭೇಟಿ ಮಾಡಿದ್ದೇನಾ..? ಪಕ್ಷದ ಶಾಸಕ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿದ್ದೇನೆ.ಅದರಲ್ಲಿ ತಪ್ಪೇನಿದೆ..? ನಾವು ಭೇಟಿ ಮಾಡಿದರೆ ಪಕ್ಷಕ್ಕೆ ಎನೂ ತೊಂದರೆ ಆಗುವುದಿಲ್ಲ.ಅದು ಸಭೆಯಲ್ಲ,ಚಹಾ ಕುಡಿಯಲು ಕರೆದಿದ್ದರು.ಗೃಹ ಸಚಿವರ ಭೇಟಿಗೆ ಹೋದವನು ಅಲ್ಲಿಂದ ರೇಣುಕಾಚಾರ್ಯ ಅವರ ಕಚೇರಿಗೆ ಹೋಗಿದ್ದೆ” ಎಂದರು.

”ನಾನು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರೋಧಿ, ರೇಣುಕಾಚಾರ್ಯ ನನ್ನ ಮೇಲೆ ಮಾತನಾಡಿದರೂ ನಾನು ಯಾವತ್ತೂ ರೇಣುಕಾಚಾರ್ಯ ಮೇಲೆ ಮಾತಾನಾಡಿಲ್ಲ. ನಾನು ರೇಣುಕಾಚಾರ್ಯ ಮೇಲೆ ಮಾತಾಡಿದರೆ ನಮ್ಮ ಟಾರ್ಗೆಟ್ ಆಗಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲಿನ ಫೋಕಸ್ ಬದಲಾಗುತ್ತಿತ್ತು” ಎಂದು ಯತ್ನಾಳ್ ಸಮಜಾಯಿಷಿ ನೀಡಿದ್ದಾರೆ.

”ನಾನು ರಮೇಶ ಜಾರಕಿಹೊಳಿ ಊಟಕ್ಕೆ ಸೇರಿದ್ದೇವು. ಕೆಲವರಿಗೆ 10 ಓಟ್ ತರೋ ಯೋಗ್ಯತೆ ಇಲ್ಲ.ಅಧಿಕಾರಕ್ಕೆ ಮಠ ಕಟ್ಟುತ್ತಾ ಇದ್ದಾರೆ.ಅಂತಹವರನ್ನು ಮಂತ್ರಿ ಮಾಡಿದ್ದಾರೆ.ಇವರಿಂದ ಉಪಯೋಗ ಇಲ್ಲ. 3 ನೇ ಮಠ ಮಾಡೋಕೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next