Advertisement

ನಾನು ಸಿದ್ದು ಕಾಂಗ್ರೆಸ್‌ನವನಲ್ಲ : ಅಮಾನತಿಗೆ ರೋಷನ್‌ ಬೇಗ್‌ ಆಕ್ರೋಶ

11:53 AM Jun 21, 2019 | Vishnu Das |

ಬೆಂಗಳೂರು: ನಾನು ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹೊರತು ಸಿದ್ದರಾಮಯ್ಯ ಕಾಂಗ್ರೆಸ್‌ನ ಕಾರ್ಯಕರ್ತ ಅಲ್ಲ ಎಂದು ಶಿವಾಜಿನಗರ ಶಾಸಕ ಮತ್ತು ಮಾಜಿ ಸಚಿವ ರೋಷನ್‌ ಬೇಗ್‌ ಪಕ್ಷದಿಂದ ಅಮಾನತು ಮಾಡಿರುವ ಕುರಿತು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್‌ ಬೇಗ್‌
ನಿನ್ನೆ ರಾತ್ರಿ ನನಗೆ ಪಕ್ಷದಿಂದ ಸಂಸ್ಪೆಂಡ್‌ ಮಾಡಿರುವ ಕುರಿತು ಸುದ್ದಿ ಬಂತು. ಸತ್ಯ ಹೇಳಿರುವುದು ಅಪರಾಧವೇ? ಈಗಲೂ ನಾನೊಬ್ಬ ಕಾಂಗ್ರೆಸ್‌ ಪಕ್ಷದ ಶಿಸ್ತಿನ ಸಿಪಾಯಿ ಎಂದರು.

ನನ್ನ ಮೇಲೆ ಮಾತ್ರ ಯಾಕೆ ಕ್ರಮ ?

ಕೋಲಾರದಲ್ಲಿ ಮುನಿಯಪ್ಪ ಅವರನ್ನುಸೋಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿದವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಮಂಡ್ಯದಲ್ಲಿ ಸುಮಲತಾ ಅವರನ್ನು ಬಹಿರಂಗವಾಗಿ ಭೇಟಿಯಾಗಿ ಬೆಂಬಲ ಸೂಚಿಸಿದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ತುಮಕೂರಿನಲ್ಲಿ ಪಕ್ಷದ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಯಾಕೆ ಮೋಸ ಮಾಡಿದಿರಿ ಎಂದು ಪ್ರಶ್ನಿಸಿದರು.

ರಮೇಶ್‌ ಜಾರಕಿಹೊಳಿ, ತುಮಕೂರಿನ ರಾಜಣ್ಣ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.

Advertisement

ರಾಹುಲ್‌ ರನ್ನ ಎಂದೂ ಟೀಕಿಸಿಲ್ಲ

ನಾನೂ ಪಕ್ಷದ ನಾಯಕರನ್ನು ಟೀಕಿಸಿದ್ದೇನೆ ಹೊರತು ರಾಹುಲ್‌ ಗಾಂಧಿ ಅವರನ್ನ ಎಂದೂ ಟೀಕಿಸಿಲ್ಲ. ಅವರು ನಮ್ಮ ಪಕ್ಷದ ನಾಯಕರು.ಅವರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ ಎಂದರು.

ಕಾರ್ಯಕರ್ತರ ಅಭಿಪ್ರಾಯ

ಬರಿ ಮುಚ್ಚಿದ ಬಾಗಿಲಿನಲ್ಲಿ ಗುಸು ಗುಸು ಮಾತನಾಡುವುದಕ್ಕೆ ಆಗುವುದಿಲ್ಲ. ನಾನು ಸಾವಿರಾರು ಕಾರ್ಯಕರ್ತರ ಅಭಿಪ್ರಾಯ. ಇಡೀ ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ನನಗೆ ಕರೆ ಮಾಡಿ ನೀವು ಹೇಳಿದ್ದು ಸರಿಯಾಗಿದೆ ಎಂದಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಲೀಡ್‌

ನಮ್ಮ ಪಕ್ಷದ ಅಧ್ಯಕ್ಷರ ಕ್ಷೇತ್ರದಲ್ಲಿ ಬಿಜೆಪಿಗೆ 25 ಸಾವಿರ ಮತಗಳ ಲೀಡ್‌ ಬಂದಿತ್ತು. ಬಾದಾಮಿಯಲ್ಲಿ ಬಿಜೆಪಿಗೆ 9 ಸಾವಿರ ಲೀಡ್‌ ಬಂದಿತ್ತು ಆದರೆ ಶಿವಾಜಿನಗರದಲ್ಲಿ ಕಾಂಗ್ರೆಸ್‌ಗೆ ಲೀಡ್‌ ತರಿಸಿ ಕೊಟ್ಟಿದ್ದೆ,ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಲಿಲ್ಲ ಎಂದರು.

ನನ್ನ ವಿರುದ್ಧ ಕ್ರಮಕ್ಕೆ ಸಿದ್ಧರಾಮಯ್ಯ ಅವರು ಒತ್ತಡ ಹಾಕಿದ್ದಾರೆ ಎಂದು ಕಿಡಿ ಕಾರಿದರು.

ನಮ್ಮ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನಖರ್ಗೆ , ಮುನಿಯಪ್ಪ, ಎಚ್‌.ಕೆ.ಪಾಟೀಲ್‌,ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್‌ ಹಿರಿಯ ನಾಯಕರ ವಿರುದ್ಧ ಹೇಳಿಕೆ ನೀಡಿ ಮುಜುಗರಕ್ಕೆ ಕಾರಣವಾದ ಕಾರಣಕ್ಕೆ ಬೇಗ್‌ ರನ್ನು ಕಾಂಗ್ರೆಸ್‌ ಪಕ್ಷದ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಎಐಸಿಸಿ ಸೂಚನೆಯ ಮೇರೆಗೆರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್‌ ಘೋರ್ಪಡೆ ಅಮಾನತು ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next