Advertisement

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

04:43 PM Oct 16, 2021 | Team Udayavani |

ನವದೆಹಲಿ: ನಾನು ಹಂಗಾಮಿಯಲ್ಲ, ಕಾಂಗ್ರೆಸ್ ಹೈಕಮಾಂಡ್ ನ ಪೂರ್ಣ ಪ್ರಮಾಣದ ಅಧ್ಯಕ್ಷೆಯಾಗಿದ್ದೇನೆ. ಯಾವುದೇ ಅಸಮಾಧಾನ ಇದ್ದರೂ ಅದನ್ನು ಮಾಧ್ಯಮಗಳ ಮೂಲಕ ಚರ್ಚಿಸುವ ಅಗತ್ಯವಿಲ್ಲ ಎಂದು ಸೋನಿಯಾಗಾಂಧಿ ಶನಿವಾರ(ಅಕ್ಟೋಬರ್ 16) ಜಿ.23 ಮುಖಂಡರಿಗೆ ಖಡಕ್ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.

Advertisement

2022ರ ನಲ್ಲಿ ಕಾಂಗ್ರೆಸ್ ಪಕ್ಷದ ಪೂರ್ಣ ಪ್ರಮಾಣಧ ಅಧ್ಯಕ್ಷರ ಚುನಾವಣೆ ನಡಯಲಿದೆ. ಪಕ್ಷದಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಸೋನಿಯಾಗಾಂಧಿ ಹೇಳಿದರು. ಆದರೆ ಪಕ್ಷದ ಒಗ್ಗಟ್ಟು ಮತ್ತು ಪಕ್ಷದ ಹಿತಾಸಕ್ತಿಯಿಂದಾಗಿ ಪಕ್ಷದ ಮೌಲ್ಯವನ್ನು ಎತ್ತಿಹಿಡಿಯಬೇಕಾಗಿದೆ ಎಂದು ಸೋನಿಯಾ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.

ಪಕ್ಷದೊಳಗಿನ ವಿಚಾರದ ಬಗ್ಗೆ ಬಹಿರಂಗವಾಗಿ ಮಾಧ್ಯಮದ ಮೂಲಕ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಪಕ್ಷದ ಮುಖಂಡರ ಪ್ರಾಮಾಣಿಕ, ದಿಟ್ಟತನದ ಟೀಕೆ ಮೆಚ್ಚುವುದಾಗಿ ಸೋನಿಯಾ ಹೇಳಿದರು.

2022ರ ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಬಹುತೇಕ ನಾಯಕರು ರಾಹುಲ್ ಗಾಂಧಿಯೇ ಮುಂದಿನ ಅಧ್ಯಕ್ಷರಾಗಲಿ ಎಂದು ಸಿಡಬ್ಲ್ಯುಸಿ ಸಭೆಯಲ್ಲಿ ಹಲವು ಮುಖಂಡರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next