Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ. ಶಿವಕುಮಾರ್ ಸ್ವಂತ ಹೋರಾಟದಿಂದ ಮೇಲೆ ಬಂದ ನಾಯಕರು. ಅವರು ಕಾಂಗ್ರೆಸ್‌ನ ಪ್ರಭಾವಿ ನಾಯಕ, ಕಾಂಗ್ರೆಸ್‌ನ ಭಾಗವಾಗಿದ್ದಾರೆ. ಆಗ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸರ್ಕಾರ ಕ್ರಮದ ಬಗ್ಗೆ ಕ್ಷಮೆ ಕೇಳಿರುವುದರಲ್ಲಿ ತಪ್ಪೇನೂ ಇಲ್ಲ ಎಂದರು. ಅವರ ಪ್ರತ್ಯೇಕ ಲಿಂಗಾಯತ ಧರ್ಮದ ನಿಲುವಿನ ಬಗ್ಗೆ ಕ್ಷಮೆ ಕೇಳಿರುವುದರಲ್ಲಿ ನಮ್ಮ ಸಮ್ಮತಿಯೂ ಇದೆ.ಅವರನ್ನು ವರ್ಣಿಸುವುದಕ್ಕೆ ಹೇಳುತ್ತಿಲ್ಲ.ಅವರು ಕಾಂಗ್ರೆಸ್ ಪಕ್ಷದ ಪಕ್ಕಾ ಅಭಿಮಾನಿ.ಅವರ ರಾಜಕಾರಣ, ಅವರಲ್ಲಿರುವ ಸ್ಪರ್ಧಾತ್ಮಕ ಮನೋಭಾವ ಇನ್ನುಳಿದವರಲ್ಲಿ ಇಲ್ಲ ಎಂದರು.