Advertisement

ಹೊಸ ವಿನ್ಯಾಸದ ಹ್ಯುಂಡೈ ವೆನ್ಯೂ

12:22 PM Jun 11, 2019 | Sriram |

ಸಣ್ಣ ಎಸ್‌ಯುವಿ ಕಾರುಗಳನ್ನು ಬಳಸುವವರಿಗೆ ವೆನ್ಯೂ ಒಂದು ಉತ್ತಮ ಆಯ್ಕೆ. ಇ, ಎಸ್‌ಎಕ್ಸ್‌, ಎಸ್‌ಎಕ್ಸ್‌ಪ್ಲಸ್‌, ಎಸ್‌ಎಕ್ಸ್‌ ಒ ಮಾದರಿಯಲ್ಲಿ ಈ ಕಾರು ಲಭ್ಯವಿದೆ. ಆರಂಭಿಕ 6.2 ಲಕ್ಷ ರೂ.ಗಳಿಂದ (ಎಕ್ಸ್‌ಷೋರೂಂ) ಇದರ ಬೆಲೆ ಆರಂಭವಾಗುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ಗ‌ಳಲ್ಲಿ ಮೂರು ಮಾದರಿಯ ಎಂಜಿನ್‌ ಆಯ್ಕೆ ಇರುವುದರಿಂದ ಆಯ್ಕೆ ಸುಲಭವಾಗಿದೆ. ನಗರ ಸವಾರಿ ಸುತ್ತಾಟಗಳಿಗೆ ಇದು ಉತ್ತಮವಾಗಿದೆ.

Advertisement

ಕಾರು ಈಗ ಶ್ರೀಮಂತಿಕೆಯ ಸಂಕೇತವಾಗಿ ಮಾತ್ರ ಉಳಿದಿಲ್ಲ. ಎಲ್ಲರಿಗೂ ಅದು ಅಗತ್ಯವೂ ಆಗಿದೆ. ಮಧ್ಯಮ ವರ್ಗದವರೂ ಕಾರುಗಳನ್ನು ಕೊಳ್ಳಲು ಆಸಕ್ತಿ ಹೆಚ್ಚು ಹೆಚ್ಚು ತೋರಿಸುತ್ತಿರುವುದರಿಂದ ಅಂತಹ ವರ್ಗದವರಿಗಾಗಿಯೇ ವ ವಿಶೇಷವಾಗಿ ವಿನ್ಯಾಸಮಾಡಲಾದ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಮಧ್ಯಮ ವರ್ಗದ ಸಂಬಳ ಪಡೆಯುವ ಉದ್ಯೋಗಿಗಳು, ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಯಾಗಿರುವುದು ಹ್ಯುಂಡೈ ಕಂಪೆನಿಯ ಅವೆನ್ಯೂ. ಭಾರತದಲ್ಲಿ ಹೆಚ್ಚು ಬೇಡಿಕೆ ಕಂಡುಕೊಳ್ಳುತ್ತಿರುವ ಸಣ್ಣ ಎಸ್‌ಯುವಿ ಮಾದರಿಗಳಿಗೆ ಸಡ್ಡು ಹೊಡೆಯುವಂತೆ ಹ್ಯುಂಡೈ ಇತ್ತೀಚಿಗೆ ಈ ಕಾರನ್ನು ಬಿಡುಗಡೆ ಮಾಡಿದೆ.

ವಿನ್ಯಾಸ
ಈ ಕಾರು ಪಕ್ಕನೆ ನೋಡಲು ಹ್ಯುಂಡೈಯ ಕ್ರೆಟಾ ಕಾರಿನಂತೆಯೇ ಇದೆ. ಟಾಟಾ ನೆಕ್ಸಾನ್‌, ಮಾರುತಿ ಬ್ರಿàಝಾ, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್‌ ಇಕೋನ್ಪೋರ್ಟ್‌ ಮಾದರಿಯಲ್ಲಿ ತುಸು ಭಿನ್ನ ವಿನ್ಯಾಸವನ್ನು ಇದು ಹೊಂದಿದೆ. ಮುಂಭಾಗದಲ್ಲಿ ಟಾಟಾ ಹೆಕ್ಸಾ ಮಾದರಿಯಲ್ಲೋ ಹೆಡ್‌ಲೈಟ್‌ಗಳನ್ನು ಹೊಂದಿದ್ದು, ಅದರ ಮೇಲ್ಭಾಗದಲ್ಲಿ ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ. ಮಧ್ಯದಲ್ಲಿ ಹ್ಯುಂಡೈಯ ಲೋಗೋವಿದ್ದು, ಸ್ಯಾಂಟಫೆ ಕಾರನ್ನು ಹೋಲುತ್ತದೆ. ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ಗ್ಳಿದ್ದು ಹಿಂಭಾಗ ಎಲ್‌ಇಡಿ ಬ್ರೇಕ್‌ಲೈಟ್‌ಗಳನ್ನು ಹೊಂದಿದೆ. ಜತೆಗೆ ಕೆಳಗೆ ರಿವರ್ಸ್‌ ಲೈಟ್‌ಗಳನ್ನು ಹೊಂದಿದೆ. 16 ಇಂಚಿನ ಆಕರ್ಷಕ ಡೈಮಂಡ್‌ ಕಟ್‌ ಅಲಾಯ್‌ ಇದ್ದು, ದೊಡ್ಡ ಕಾರಿನ ಫೀಲ್‌ ಕೊಡುತ್ತದೆ.

ಆಂತರಿಕ ವಿನ್ಯಾಸ
ಒಳಭಾಗಕ್ಕೆ ಕಾಲಿಡುತ್ತಿದ್ದಂತೆ ಸಿಂಪಲ್‌ ಮತ್ತು ಆಕರ್ಷಕವಾಗಿರುವ ಒಳಾಂಗಣ ವಿನ್ಯಾಸ ಗಮನ ಸೆಳೆಯುತ್ತದೆ. 8 ಇಂಚಿನ ಟಚ್‌ಸ್ಕ್ರೀನ್‌ ಇರುವ ಎಚ್‌ಡಿ ಇನ್ಫೋಎಂಟರ್‌ಟೈನ್ಮೆಂಟ್‌ ಸಿಸ್ಟಂ, ಹ್ಯುಂಡೈಯ ಗಮನಸೆಳೆಯುವ ಮೀಟರ್‌ ಕನ್ಸೋಲ್‌, ಆಕರ್ಷಕ ಡ್ಯುಯಲ್‌ ಟೋನ್‌ ಇಂಟೀರಿಯರ್‌, ಡ್ಯಾಶ್‌ಬೋರ್ಡ್‌ ವಿನ್ಯಾಸ ಇದರ ಪ್ಲಸ್‌ ಪಾಯಿಂಟ್‌ ಹಾಗೆಯೇ ಮುಂಭಾಗದಲ್ಲಿ ತುಸು ಮೃದುವಾದ ಬಕೆಟ್‌ ಸೀಟ್‌ಗಳು, ಹಿಂಭಾಗ ಕಪ್‌ಹೋಲ್ಡರ್‌, ಆರ್ಮ್ ರೆಸ್ಟ್‌ ವ್ಯವಸ್ಥೆ ಇದೆ. ಒಟ್ಟು ಐವರು ಈ ಕಾರಿನಲ್ಲಿ ಪ್ರಯಾಣಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಸಣ್ಣ ಎಸ್‌ಯುವಿಗಳ ಮಾದರಿಯಲ್ಲೇ ಪ್ರಥಮವೆಂಬಂತೆ ಈ ಕಾರಿನಲ್ಲಿ ಏರ್‌ ಪ್ಯೂರಿಫೈಯರ್‌ ಇದೆ. ಹಾಗೆಯೇ, ಹಿಂಭಾಗಕ್ಕೂ ಎ.ಸಿ ವ್ಯವಸ್ಥೆ, ಚಾರ್ಜಿಂಗ್‌, ಬ್ಲೂಟೂತ್‌ ವ್ಯವಸ್ಥೆ ಇದರಲ್ಲಿದೆ. ಐಷಾರಾಮಿ ಕಾರುಗಳಲ್ಲಿರುವ ಸನ್‌ರೂಫ್ ವ್ಯವಸ್ಥೆ, ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆ, ಕೂಲ್ಡ್‌ಗ್ಲೋವ್‌ ಬಾಕ್ಸ್‌, ರಿಮೋಟ್‌ ಎಂಜಿನ್‌ ಸ್ಟಾರ್ಟ್‌ ವ್ಯವಸ್ಥೆಯೂ ಇದೆ.

ತಾಂತ್ರಿಕತೆ
ಮೂರು ಎಂಜಿನ್‌ ಮಾದರಿಯಲ್ಲಿ ವೆನ್ಯೂ ಲಭ್ಯ. 3 ಸಿಲಿಂಡರ್‌ನ 1 ಲೀಟರ್‌ನ ಟಬೋìಚಾರ್ಜ್‌ಡ್‌ ಜಿಡಿಐ ಪೆಟ್ರೋಲ್‌ ಎಂಜಿನ್‌ 120 ಎಚ್‌ಪಿ 172 ಟಾರ್ಕ್‌ ಹೊಂದಿದೆ. ಇದರೊಂದಿಗೆ 1.2 ಲೀ.ನ ಪೆಟ್ರೋಲ್‌ (83 ಎಚ್‌ಪಿ) ಮತ್ತು 1.4 ಲೀ.ನ ಡೀಸೆಲ್‌ ಎಂಜಿನ್‌ (90ಎಚ್‌ಪಿ) ಆಯ್ಕೆ ಕೂಡ ಇದೆ. ವಿವಿಧ ಎಂಜಿನ್‌ ಆಯ್ಕೆಗಳಿಗೆ ಅನುಗುಣವಾಗಿ 7ಸ್ಪೀಡ್‌, 6 ಸ್ಪೀಡ್‌, 5 ಸ್ಪೀಡ್‌ ಗಿಯರ್‌ ವ್ಯವಸ್ಥೆಯನ್ನು ಹೊಂದಿದೆ. ಎಂಜಿನ್‌ ಅತ್ಯಂತ ನವಿರಾಗಿದ್ದು, ಹೆಚ್ಚು ವೈಬ್ರೇಷನ್‌ ಇಲ್ಲ. ಚಾಲನೆಗೆ ಆರಾಮದಾಯಕವಾಗಿದೆ. ಆರು ಏರ್‌ಬ್ಯಾಗ್‌ಗಳಿದ್ದು, ಇದರೊಂದಿಗೆ ಎಬಿಎಸ್‌, ಇಬಿಡಿ ವ್ಯವಸ್ಥೆಯೂ ಇದೆ.

Advertisement

-ಈಶ

Advertisement

Udayavani is now on Telegram. Click here to join our channel and stay updated with the latest news.

Next