Advertisement

ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬರಲಿರುವ ಬಿಎಸ್‌6 ಸ್ಯಾಂಟ್ರೋ ಹ್ಯಾಚ್‌ಬ್ಯಾಕ್‌

11:27 AM Jan 05, 2020 | mahesh |

ದೇಶದಲ್ಲಿರುವ ಕಾರು ತಯಾರಕ ಕಂಪೆನಿಗಳು ಬಿಎಸ್‌6 ನಿಬಂಧನೆಯ ಕಾರುಗಳನ್ನು ತಯಾರಿಸುವಲ್ಲಿ ಕಾರ್ಯನಿರತವಾಗಿವೆ. ಹ್ಯುಂಡೈ ಈಗಾಗಲೇ ಓರಾ ಎಸ್‌6 ನಿಬಂಧನೆಯುಳ್ಳ ಸೆಡಾನ್‌ ಮಾದರಿಯ ಕಾರನ್ನು ವಾಹನ ಮಾರುಕಟ್ಟೆಗೆ ಅನಾವರಣಗೊಳಿಸಿದ್ದು, ಇದೀಗ ಮತ್ತೂಂದು ಬಿಎಸ್‌6 ನಿಬಂಧನೆಯುಳ್ಳ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್‌ ಅನ್ನು ಮುಂಬರುವ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ಬಿಎಸ್‌6 ಸ್ಯಾಂಟ್ರೋ ಬಿಡುಗಡೆ ಮಾಹಿತಿ ಹಂಚಿಕೊಂಡಿದ್ದು, ವಾಹನದ ವಿಶೇಷತೆಗಳನ್ನು ಹೇಳಿಕೊಂಡಿದೆ.

Advertisement

ಮೂರು ಆವೃತ್ತಿಗಳಲ್ಲಿ
ಹ್ಯುಂಡೈನ ಬಿಎಸ್‌6 ಸ್ಯಾಂಟ್ರೋವನ್ನು ಆಸ್ಟಾ, ಸ್ಪೋರ್ಟ್ಸ್ ಹಾಗೂ ಮ್ಯಾಗ್ನಾ ಈ ಮೂರು ಆವೃತ್ತಿಗಳಲ್ಲಿ ಖರೀದಿಸಬಹುದಾಗಿದೆ. ಬಿಎಸ್‌ ನಿಬಂಧನೆಯೊಂದಿಗೆ ಸ್ಯಾಂಟ್ರೋವನ್ನು 1.1 ಲೀಟರ್‌ ಪೆಟ್ರೋಲ್‌ ಎಂಜಿನ್‌ ಅವೃತ್ತಿಯನ್ನು ಒಳಗೊಂಡಿದೆ.

69 ಪಿಎಸ್‌ ಶಕ್ತಿ ಸಾಮರ್ಥ್ಯ
ಇದರ ಎಂಜಿನ್‌ಗಳು 69 ಪಿಎಸ್‌ ಶಕ್ತಿಯನ್ನು ಹಾಗೂ 99 ಎನ್‌ಎಂ ಟಾರ್ಕ್‌ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಆಧುನಿಕ ತಂತ್ರಜ್ಞಾನ
5 ಸ್ಪೀಡ್‌ ಮಾನವ ಚಾಲಿತ ಹಾಗೂ ಸ್ವಯಂ ಚಾಲಿತ ಗೇರ್‌ ಬಾಕ್ಸ್‌ ಹೊಂದಿರುವ ಸ್ಯಾಂಟ್ರೋ ಬಿಎಸ್‌6 ಹ್ಯಾಚ್‌ಬ್ಯಾಕ್‌ ಮೊದಲಿದ್ದ ಟ್ರಿಮ್‌ಗಳನ್ನೇ ಪಡೆದುಕೊಂಡಿದೆ. ಇದನ್ನು ಹೊರತು ಪಡಿಸಿ ಅದತ ನೂತನ ವಿನ್ಯಾಸದ ವೈಶಿಷ್ಟ್ಯತೆಗಳನ್ನು ನೋಡುವುದಾದರೆ ಸ್ಯಾಂಟ್ರೋ ಬಿಎಸ್‌6 ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಇನ್ಫೋಟೇನ್ಮೆಂಟ್‌ ಸೌಲಭ್ಯ
ವಾಹನದ ಒಳಭಾಗದಲ್ಲಿ ಟಚ್‌ಸ್ಕ್ರೀನ್‌ ಇನ್ಫೋಟೇನ್ಮೆಂಟ್‌ ಸೌಲಭ್ಯವಿದ್ದು, ಸ್ಟೇರಿಂಗ್‌ ಅನ್ನು ಆಡಿಯೋ ನಿಯಂತ್ರಕದಿಂದ ವಿನ್ಯಾಸಿಸಲಾಗಿದೆ. ಈ ಟಚ್‌ಸ್ಕ್ರೀನ್‌ಗಳು ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇಯನ್ನು ಒಳಗೊಂಡಿದೆ. ಸುರಕ್ಷತೆಯ ವಿಚಾರದಲ್ಲೂ ವಿಶೇಷ ಒತ್ತು ನೀಡಲಾಗಿದ್ದು, ಚಾಲಕರ ಸುರಕ್ಷತೆಗಾಗಿ ಕಾರ್‌ನ ಹಿಂಭಾಗದಲ್ಲಿ ಪಾರ್ಕಿಂಗ್‌ ಕ್ಯಾಮರಾವನ್ನು, ಮುಂಭಾಗದಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಏರ್‌ಬ್ಯಾಗ್‌ಗಳನ್ನು, ಸೀಟ್‌ ಬೆಲ್ಟ್‌ಗಳನ್ನು ಮತ್ತು ಇಬಿಡಿಯಿರುವ ಎಬಿಎಸ್‌ಅನ್ನು ಅಳವಡಿಸಲಾಗಿದೆ.

Advertisement

ಮುಂಬರುವ ತಿಂಗಳಿನಲ್ಲಿ ಅನಾವರಣಗೊಳ್ಳಲಿರುವ ಬಿಎಸ್‌6 ನಿಬಂಧನೆಯ ಹ್ಯುಂಡೈ ಸ್ಯಾಂಟ್ರೋನ ಮೌಲ್ಯವು ಈಗಿರುವ ಸ್ಯಾಂಟ್ರೋಗಿಂತಲೂ ಸುಮಾರು 15,000 ರೂ ಗಳಿಂದ 20,000 ರೂ ಗಳವರೆಗೆ ಹೆಚ್ಚಿರ ಬಹುದೆಂದು ಅಂದಾಜಿಸಲಾಗಿದ್ದು, ಈಗಿರುವ ಸ್ಯಾಂಟ್ರೋದ ಬೆಲೆಯು 4.29 ಲಕ್ಷ ರೂಪಾಯಿಗಳಿಂದ 5.78 ಲಕ್ಷ ರೂಪಾಯಿಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next