ಬೆಂಗಳೂರು: ದೇಶದ ಮೊದಲ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ಸ್ ನೀಡಿದ ಹಾಗೂ ಅತಿಹೆಚ್ಚು ರಫ್ತುದಾರರನ್ನು
ಹೊಂದಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್, ಇದೀಗ 11,000 ರೂ. ಗೆ ಹ್ಯುಂಡೈ ಎಕ್ಸ್‌ಟರ್ ಬುಕ್ಕಿಂಗ್ ಅನ್ನು ತೆರೆಯಲಾಗಿದೆ.
ಈ ಕುರಿತು ಮಾತನಾಡಿದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಿಒಒ ತರುಣ್ ಗಾರ್ಗ್, ಇತ್ತೀಚೆಗೆ ನೂತನ ಎಸ್‌ಯುವಿ ಹಾಗೂ ಹ್ಯುಂಡೈ ಎಕ್ಸ್ ಟರ್‌ನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದು, ಪೂರ್ಣ ಶ್ರೇಣಿಯ ಎಸ್‌ಯುವಿ ತಯಾರಕರಾಗಿ ಎಚ್‌ಎಂಐ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಲು ಹೊಸ ವಿಭಾಗಕ್ಕೆ ಪ್ರವೇಶಿಸಲಾಗುತ್ತಿದೆ. ಅದೇ ರೀತಿ, ಜೆನ್ ಝಡ್ ಗ್ರಾಹಕರ ಆಕಾಂಕ್ಷೆ ಮತ್ತು ಜೀವನ ಶೈಲಿಯನ್ನು ಪರಿಗಣಿಸಿ ಹ್ಯುಂಡೈ ಎಕ್ಸ್‌ಟರ್ ಯುವ ಗ್ರಾಹಕರಿಗೆ ಉತ್ತೇಜಕ ಅನುಭವಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಹ್ಯುಂಡೈ ಎಕ್ಸ್‌ಟರ್ ವಿಭಿನ್ನ ಅನುಭವಗಳ ಜತೆಗೆ ನಗರ ಮತ್ತು ಹೊರಾಂಗಣ ಜೀವನಶೈಲಿಯನ್ನು ಉತ್ತೇಜಿಸುತ್ತದೆ. ಈ ಕಾರು ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಿದ್ಧಗೊಂಡಿದ್ದು, 1.2 ಲೀ. ಕಪ್ಪಾ ಪೆಟ್ರೋಲ್ ಎಂಜಿನ್(ಇ-20 ಇಂಧನ), 5- ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್(5 ಎಂಟಿ) ಮತ್ತು ಸ್ಮಾರ್ಟ್ ಆಟೋ ಎಎಂಟಿ( ಸ್ವಯಂಚಾಲಿತ ಮ್ಯಾನು ವಲ್ ಟ್ರಾನ್ಸ್‌ಮಿಷನ್) ಹಾಗೂ ಕಪ್ಪಾ ಪೆಟ್ರೋಲ್ ಜತೆಗೆ ಸಿಎನ್‌ಜಿ ಎಂಜಿನ್ ಕೂಡಾ ಸುಸಜ್ಜಿತವಾಗಿದೆ.
ಎಚ್‌ಎಂಐ ಹ್ಯುಂಡೈ ಎಕ್ಸ್‌ಟರ್ ಅನ್ನು ಎಕ್ಸ್, ಎಸ್, ಎಸ್‌ಎಕ್ಸ್, ಎಸ್‌ಎಕ್ಸ್(ಒ) ಮತ್ತು ಎಸ್‌ಎಕ್ಸ್(ಒ) ಕನೆಕ್ಟ್
ಎಂಬ ಐದು ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ನೂತನ ಎಸ್‌ಯುವಿಯನ್ನು “ರೇಂಜರ್ ಖಾಕಿ’ ವಿಶಿಷ್ಟ ಬಣ್ಣದಲ್ಲಿ
ಪರಿಚಯಿಸಿದೆ. ಹ್ಯುಂಡೈ ಎಕ್ಸ್‌ಟರ್‌ನ ಮುಂಭಾಗವು ಪ್ಯಾರಾಮೆಟ್ರಿಕ್ ಫ್ರಂಟ್ ಗಿಲ್ ಹೊಂದಿದೆ. ಎಸ್‌ಯುವಿ
ವಿನ್ಯಾಸವು ಎ-ಸಿಗ್ನೇಚರ್ ಎಲ್‌ಇಡಿ-ಡಿಆರ್‌ಎಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ನ್ಪೋರ್ಟಿ ಸ್ಕಿಡ್ ಪ್ಲೇಟ್
ಹೊಂದಿದೆ. ಡೈಮಂಡ್ ಕಟ್ ಅಲಾಯ್ ಚಕ್ರಗಳೊಂದಿಗೆ ಡೈನಾಮಿಕ್ ಭಾಗವು ಆಕರ್ಷಕವಾಗಿವೆ.
Related Articles
ಭಾರತದಾದ್ಯಂತ ಹ್ಯುಂಡೈ ಡೀಲರ್‌ಶಿಪ್‌ಗ್ಳಲ್ಲಿ ಹುಂಡೈ ಎಕ್ಸ್‌ಟರ್ ಅನ್ನು https://clicktobuy.hyundai.co.in/#/
bookACar?modelCode=HW ಮೂಲಕ ಬುಕ್ ಮಾಡಬಹುದಾಗಿದೆ