ಸಿಯೊಲ್: ದಕ್ಷಿಣಕೊರಿಯಾದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ “ಹ್ಯುಂಡೈ ಮೋಟಾರ್ಸ್’, ಮುಂದಿನ 8-10 ವರ್ಷಗಳಲ್ಲಿ ಹಾರಾಡುವ ಕಾರುಗಳನ್ನು ಮಾರುಕಟ್ಟೆಗೆ ತರುವ ಆಲೋಚನೆ ಹೊಂದಿರುವುದಾಗಿ ತಿಳಿಸಿದೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಕಂಪನಿಯ ಅರ್ಬನ್ ಏರ್ ಮೊಬೈಲಿಟಿ ಯೂನಿಟ್‌ನ ಮುಖ್ಯಸ್ಥ ಜೈವೊನ್ ಶಿನ್, “ಮಹಾ ನಗರಗಳಲ್ಲಿ ಜನರು ಟ್ರಾಫಿಕ್ ಜಾಮ್‌ಗಳಿಂದ ಕಂಗೆಟ್ಟಿದ್ದಾರೆ. ಟ್ರಾಫಿಕ್ ಜಾಮ್ ಹಾಗೂ ರಸ್ತೆಗಳ ಸಮಸ್ಯೆಗಳಿಂದ ಪಾರಾಗಲು ಹಾರುವ ಕಾರುಗಳು ಸಹಾಯ ಮಾಡಲಿವೆ.
ಹ್ಯುಂಡೈ ಕಂಪನಿ ಹಾರಾಡುವ ಕಾರುಗಳ ತಯಾರಿಕೆ ಬಗ್ಗೆ ಆಸಕ್ತಿ ಹೊಂದಿದೆ. ಅದರಿಂದ, ಮುಂದಿನ 8-10 ವರ್ಷಗಳಲ್ಲಿ ಈ ಕನಸು ನನಸಾಗಬಹುದು” ಎಂದಿದ್ದಾರೆ. “ಮೊದಲ ಹಂತದಲ್ಲಿ ಬಿಡುಗಡೆಯಾಗುವ ಹಾರಾಡುವ ಕಾರುಗಳಲ್ಲಿ ಒಟ್ಟಿಗೆ ಐವರು ಅಥವಾ ಆರು ಜನರು ಪ್ರಯಾಣಿಸುವಂತೆ ವಿನ್ಯಾಸಗೊಳಿಸಲು ಉದ್ದೇಶಿಸಲಾಗಿದೆ” ಎಂದು ಶಿನ್ ತಿಳಿಸಿದ್ದಾರೆ.
ಜಾಧವ್ ಪರ ವಾದಿಸಲ್ಲ
ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪರ ವಾದಿಸಲು ಪಾಕ್‌ನ
ನ್ಯಾಯವಾದಿಗಳು ನಿರಾಕರಿಸಿದ್ದಾರೆ.
ಇಸ್ಲಾಮಾಬಾದ್ ಹೈಕೋರ್ಟ್ ಇಬ್ಬರು ನ್ಯಾಯವಾದಿಗಳಾಗಿರುವ ಆಬಿದ್ ಹುಸೇನ್ ಮಿಂಟೋ ಮತ್ತು ಮಕೂªಮ್ ಅಲಿ ಖಾನ್ ನೆರವನ್ನು ಕೋರಿತ್ತು. ಆದರೆ ಅವರು ಜಾಧವ್ ಪರ ವಾದಿಸಲು ನಿರಾಕರಿಸಿದ್ದಾರೆ. ಮಿಂಟೋ ತಾನು ನಿವೃತ್ತಿಯಾಗಿರುವುದಾಗಿ ತಿಳಿಸಿದ್ದರೆ, ಖಾನ್ ಬೇರೆ ಪ್ರಕರಣದಲ್ಲಿ ಬ್ಯುಸಿಯಾಗಿರುವುದಾಗಿ ಅರಿಕೆ ಮಾಡಿದ್ದಾರೆ.