Advertisement
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಪೈ ಅವರು ಅದೃಷ್ಟಶಾಲಿಗಳಿಗೆ ಬಹುಮಾನಗಳನ್ನು ವಿತರಿಸಿದರು.
Related Articles
Advertisement
ಇಂದು ರಾಜ್ಯದಲ್ಲಿ 94 ಮಳಿಗೆಗಳು, ತೆಲಂಗಾಣದಲ್ಲಿ 20 ಹಾಗೂ ಆಂಧ್ರದಲ್ಲಿ 1 ಮಳಿಗೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ಅದರಂತೆ ಮುಂದಿನ ಆರ್ಥಿಕ ವರ್ಷದಲ್ಲಿ ಮಳಿಗೆಗಳ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸುವ ಗುರಿಯಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ 1,800 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು.
ಜನರಿಗೆ ಕೈಗೆಟುಕುವ ದರದಲ್ಲಿ ಗೃಹಬಳಕೆ ವಸ್ತುಗಳನ್ನು ತಲುಪಿಸುವ ಉದ್ದೇಶ ಸಂಸ್ಥೆಯದಾಗಿದೆ. ಗ್ರಾಹಕರು, ಸಿಬ್ಬಂದಿ, ವಿತರಕರು ಸೇರಿ ಸಂಸ್ಥೆಗೆ ಸೇರುವ ಎಲ್ಲರ ಹಿತ ಕಾಪಾಡುವ ಹೊಣೆಯಿದೆ. ಅದರಂತೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಂಸ್ಥೆ ತೊಡಗಿಕೊಂಡಿದೆ.
ಪ್ರಮುಖವಾಗಿ ಶಿಕ್ಷಣ, ಹಿರಿಯ ನಾಗರಿಕರು ಹಾಗೂ ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕಿ ಮೀನಾ ರಾಜಕುಮಾರ್ ಪೈ, ನಿರ್ದೇಶಕರಾದ ಗುರುಪ್ರಸಾದ್ ಪೈ, ಅಜಿತ್‌ಕುಮಾರ್ ಪೈ, ಪುಷ್ಪಾ ಪೈ ಹಾಗೂ ಉತ್ತಮ್ ಕುಮಾರ್ ಪೈ ಹಾಜರಿದ್ದರು.
ಹೊಸ ವರ್ಷದ ಲಕ್ಕಿ ಡ್ರಾ: ಹೊಸ ವರ್ಷದ ಸೂಪರ್ ಸೇಲ್ ಅವಧಿಯ ಕ್ರಿಸ್‌ಮಸ್, ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಸೇಲ್‌ಗಳ ಲಕ್ಕಿ ಡ್ರಾದ ಅದೃಷ್ಟಶಾಲಿ ಆಯ್ಕೆಯನ್ನು ಭಾನುವಾರ ನಡೆಸಲಾಯಿತು. ಮೊದಲ ಬಹುಮಾನವಾಗಿ 100 ಅದೃಷ್ಟಶಾಲಿಗಳಿಗೆ 1 ಲಕ್ಷ ರೂ. ಮೌಲ್ಯದ ಬಂಗಾರ, 2ನೇ ಬಹುಮಾನವಾಗಿ 100 ಗ್ರಾಹಕರಿಗೆ 50 ಸಾವಿರ ರೂ. ಮೌಲ್ಯದ ಬಂಗಾರ, 3ನೇ ಬಹುಮಾನವಾಗಿ 100 ಮಂದಿಗೆ, 5 ಸಾವಿರ ರೂ. ಮೌಲ್ಯದ ಬಂಗಾರ, 4ನೇ ಬಹುಮಾನವಾಗಿ 5 ಸಾವಿರ ಗ್ರಾಹಕರಿಗೆ ಹಾಗೂ 5ನೇ ಬಹುಮಾನವಾಗಿ 50 ಸಾವಿರ ಮಂದಿಗೆ 500 ರೂ.ಗಳ ಉಚಿತ ಶಾಪಿಂಗ್ ಕೂಪನ್‌ಗಳಿಗೆ ವಿಜೇತರನ್ನು ಆಯ್ಕೆ ಮಾಡಲಾಯಿತು.