Advertisement

ಅದ್ವೈತ್‌ ಹ್ಯುಂಡೈನಿಂದ “ಫ್ರೀ ಕಾರ್‌ ಕೇರ್‌ ಕ್ಲಿನಿಕ್‌’

12:15 PM Apr 06, 2017 | Team Udayavani |

ಬೆಂಗಳೂರು: ಅದ್ವೈತ್‌ ಹ್ಯುಂಡೈ ದೇಶಾದ್ಯಂತ ತನ್ನ ಗ್ರಾಹಕರಿಗೆ 23ನೇ ಸರಣಿಯ “ಫ್ರೀ ಕಾರ್‌ ಕೇರ್‌ ಕ್ಲಿನಿಕ್‌’ ಸೇವಾ ಕಾರ್ಯಕ್ರಮವನ್ನು ಏ.11 ರವರೆಗೆ ಹಮ್ಮಿಕೊಂಡಿದೆ.

Advertisement

ಈ ಸಂದರ್ಭದಲ್ಲಿ ಹ್ಯುಂಡೈ ಮೋಟಾರ್‌ ಇಂಡಿಯಾ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ. ಕೂ ಮಾತನಾಡಿ, ಫ್ರೀ ಕಾರ್‌ ಕ್ಲಿನಿಕ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಈ ಸೇವೆಯನ್ನು ಮುಂದುವರಿಸಿದ್ದೇವೆ.

ಕಾರಿನ ತಪಾಸಣೆ ಒಳಗೊಂಡಂತೆ ಇಂಜಿನ್‌, ಟ್ರಾನ್ಸ್‌ಮಿಷನ್‌, ಎಲೆಕ್ಟ್ರಿಕಲ್‌ ಸಿಸ್ಟಂ, ಅಂಡರ್‌ಬಾಡಿ, ಎಸಿ ಮುಂತಾದವುಗಳನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ. ಸ್ಪೇರ್‌ ಪಾರ್ಟ್ಸ್, ಲೇಬರ್‌ ಚಾರ್ಜಸ್‌ ಹಾಗೂ ಇತರ ವೆಚ್ಚಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ.

ಈ ಸೇವಾ ಕಾರ್ಯದಿಂದ ಗ್ರಾಹಕರ ಮತ್ತು ನಮ್ಮ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next