Advertisement

ಹ್ಯುಂಡೈ 20ನೇ ವಾರ್ಷಿಕೋತ್ಸವ

01:12 PM Feb 03, 2018 | Team Udayavani |

ನವದೆಹಲಿ: ದೇಶದ ಎರಡನೇ ಅತಿ ಹೆಚ್ಚು ಪ್ಯಾಸೆಂಜರ್‌ ಕಾರುಗಳ ತಯಾರಕ ಸಂಸ್ಥೆ ಎನಿಸಿರುವ ಹ್ಯುಂಡೈ ಮೋಟರ್‌ ಇಂಡಿಯಾ ಲಿ., (ಎಚ್‌ಎಂಐಎಲ್‌) ಗ್ರೇಟರ್‌ ನೋಯ್ಡಾದಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ-2018ರಲ್ಲಿ ತನ್ನ 15 ಅದ್ಭುತ ಕಾರುಗಳನ್ನು ಪ್ರದರ್ಶಿಸಲಿದೆ.

Advertisement

“ಎಕ್ಸ್‌ಪಿರೀಯನ್ಸ್‌ ಹ್ಯುಂಡೈ’ ಥೀಮ್‌ ಅಡಿಯಲ್ಲಿ ನವೀನ ಹಾಗೂ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಭವಿಷ್ಯದ ಕಾರುಗಳನ್ನು ನೋಡುವ ಅವಕಾಶ ಕಾರು ಪ್ರಿಯರಿಗೆ ಲಭ್ಯವಾಗಲಿದೆ. ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈಕೆ ಕ್ಹೂ ಮಾತನಾಡಿ, ಹ್ಯುಂಡೈ ಭಾರತದಲ್ಲಿ ಕಾರುಗಳ ಉತ್ಪಾದನೆ ಮಾರಾಟವನ್ನು ಆರಂಭಿಸಿ 20 ವರ್ಷಗಳಾಗಿವೆ.

ಈ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಪರಿಸರ ಸ್ನೇಹಿ, ಚಲನಶೀಲತೆ ಮತ್ತು ಸಂಪರ್ಕ ತಂತ್ರಜ್ಞಾನಗಳುಳ್ಳ 15 ಟ್ರೆಂಡ್‌ ಸೆಟ್ಟರ್‌ ವಾಹನಗಳು ಆಟೋ ಎಕ್ಸ್‌ಪೋದ ಹಾಲ್‌ ನಂ.3ರ ಪೆವಿಲಿಯನ್‌ನಲ್ಲಿ ಪ್ರದರ್ಶನಗೊಳ್ಳಲಿವೆ.

ಹ್ಯುಂಡೈ ಸಂಸ್ಥೆ ಟೋ ಕ್ಸ್‌ಪೋದಲ್ಲಿ ಇಕೋ ಫ್ರೆಂಡ್ಲಿ, ಮೊಬಿಲಿಟಿ, ರೋಬೋಟಿಕ್‌, ಕೊನ, ಅವಾರ್ಡ್‌, ಕ್ರೀಡೆ, ಕಿಡ್ಸ್‌, ರಸ್ತೆ ಸುರಕ್ಷತೆ ಹಾಗೂ ಜೈ ಹೋ ಎಂಬ 9 ಎಕ್ಸ್‌ಪೀರಿಯೆನ್ಸ್‌ ಝೋನ್‌ಗಳನ್ನು ರಚಿಸಿದ್ದು, ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ವಿಶಿಷ್ಟ ಅನುಭವ ಪಡೆಯಲಿದ್ದಾರೆ ಎಂದು ಕ್ಹೂ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next