Advertisement
ಇಡೀ ಬೆಂಗಳೂರಿನ ಅಭಿವೃದ್ಧಿಗಾಗಿ ಬಿಬಿಎಂಪಿ ಮೂರು ವರ್ಷಗಳಿಗೆ ಖರ್ಚು ಮಾಡುವ ಅಂದಾಜು ಮೊತ್ತ (ಬಜೆಟ್)ವನ್ನು ಒಂದೇ ಒಂದು ಮಾರ್ಗದ ಸಂಚಾರದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುರಿಯಲಾಗುತ್ತಿದೆ. ಹಲವು ಕಾರಣಗಳಿಂದ ಆ ಯೋಜನೆಗಳು ಅನುಷ್ಠಾನ ಹಂತದಲ್ಲೇ ಕುಂಟುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೂಂದು ದುಬಾರಿ ಯೋಜನೆಯತ್ತ ಸರ್ಕಾರ ನೋಡುತ್ತಿದೆ. ಅದರ ಹೆಸರು- ಹೈಪರ್‌ಲೂಪ್.
Related Articles
Advertisement
“ಅದೇನೇ ಇರಲಿ, ಈ ರೀತಿಯ ಘೋಷಣೆಗಳು ದಿಕ್ಕುತಪ್ಪಿಸುವ ತಂತ್ರಗಳಾಗಿವೆ. ಇದೇ ಮಾರ್ಗದಲ್ಲಿ ಈ ಹಿಂದೆ ಮೊನೊ ರೈಲು, ಹೈಸ್ಪೀಡ್ ರೈಲು, ಉಕ್ಕಿನ ಸೇತುವೆಯಂತಹ ಯೋಜನೆಗಳೇ ಸಾಕ್ಷಿ. ಸರ್ಕಾರ ಇಂತಹ “ಆಕರ್ಷಕ ಯೋಜನೆ’ಗಳಿಗೆ ಮೊರೆಹೋಗದೆ, ವಾಸ್ತವವಾಗಿ ಸಾಧ್ಯವಿರುವ ಮತ್ತು ಜನರಿಗೂ ಕೈಗೆಟಕುವಂತಹ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬಹುದಾದ ಪರಿಣಾಮಕಾರಿ ಕಾರ್ಯಕ್ರಮಗಳಿಗೆ ಒತ್ತುನೀಡುವುದು ಸೂಕ್ತ. ಒಂದು ವೇಳೆ ಹೈಪರ್‌ಲೂಪ್ ಕಂಪನಿಯೇ ನಿರ್ಮಿಸಿದರೂ, ಅದರ ಪ್ರಯಾಣ ದರ ಸಾಮಾನ್ಯಜನರಿಗೆ ಕೈಗೆಟಕುವ ರೀತಿಯಲ್ಲಿ ಇರುತ್ತದೆ ಎಂಬುದು ಅನುಮಾನ’ ಎಂದು ರೈಲ್ವೆ ತಜ್ಞ ಸಂಜೀವ ದ್ಯಾಮಣ್ಣವರ ಹೇಳುತ್ತಾರೆ.
“ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಡು ವಲ್ಲಿಯೇ ನಮ್ಮ ಆಸಕ್ತಿ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಯಾಕೆಂದರೆ,ಕಂಡಿದ್ದೆಲ್ಲವನ್ನೂ ಮಾಡಲು ಹೋಗುತ್ತಿದ್ದೇವೆ. ಪರಿಣಾಮ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು “ಘೋಷಣೆಯ ಸರ್ಕಾರ’ಗಳಾಗುತ್ತಿವೆ. ಸಾರಿಗೆ ಮೂಲಸೌಕರ್ಯ ವಿಚಾರಕ್ಕೆ ಬಂದರೆ, ವಿಶ್ವದಲ್ಲಿ ಈಗಲೂ ಪ್ರಚಲಿತದಲ್ಲಿರುವುದುಮೆಟ್ರೋ, ಉಪನಗರ ರೈಲು, ರಸ್ತೆ ಸಾರಿಗೆ ಮಾತ್ರ. ಇದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ನಿರಂತರ ಸುಧಾರಣೆಕಾರ್ಯತಂತ್ರಗಳನ್ನು ರೂಪಿಸಬೇಕು’ ಎಂದು ನಗರ ತಜ್ಞ ಅಶ್ವಿನ್ ಮಹೇಶ್ ತಿಳಿಸುತ್ತಾರೆ.
ಬದಲಾಯ್ತಾ “ಆದ್ಯತೆ’?: ನಾಲ್ಕುಕಾರಿಡಾರ್‌ಗಳಲ್ಲಿ ನಿರ್ಮಾಣಗೊಳ್ಳಲಿರುವ ಉಪನಗರ ರೈಲು ಯೋಜನೆ ಅಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ- ಕೆಐಎಎಲ್- ದೇವನಹಳ್ಳಿ ಮಾರ್ಗ ಸರ್ಕಾರದ “ಆದ್ಯತಾ ಕಾರಿಡಾರ್’ ಆಗಿತ್ತು. ಆದರೆ, ಅನುಮೋದನೆ ದೊರೆಯುತ್ತಿದ್ದಂತೆ ಸರ್ಕಾರದ “ಆದ್ಯತೆ’ ಬದಲಾಗುತ್ತಿದೆ!
ಪ್ರಯಾಣಿಕರ ಹಿತದೃಷ್ಟಿ ಹಾಗೂ ಹೋರಾಟಗಾರರ ಒತ್ತಾಯದ ಮೇರೆಗೆ ನಗರದ ಹೃದಯಭಾಗದಿಂದ ದೇವನಹಳ್ಳಿ ನಡುವೆ ಉಪನಗರ ರೈಲು ಮಾರ್ಗ ನಿರ್ಮಿಸಲು ಸರ್ಕಾರ ಈ ಹಿಂದೆ ಮನಸ್ಸು ಮಾಡಿತ್ತು. ಆದರೆ, ಈಗ ಹಿಂದಿನ ಉತ್ಸಾಹಕಾಣುತ್ತಿಲ್ಲ. ಮೂಲಗಳ ಪ್ರಕಾರ ಉದ್ದೇಶಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ “ನಮ್ಮ ಮೆಟ್ರೋ’ ಯೋಜನೆಗೆ ಇನ್ನೂ ಹಸಿರು ನಿಶಾನೆ ದೊರಕಿಲ್ಲ. ಒಂದು ವೇಳೆ ಉಪನಗರ ರೈಲುಕೈಗೆತ್ತಿಕೊಂಡರೆ, ಮೆಟ್ರೋಗೆ ಹಿನ್ನೆಡೆ ಆಗಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ.
ವಿಮಾನ ನಿಲ್ದಾಣ ಮಾರ್ಗದಲ್ಲಿ ಹೆಚ್ಚು ವಾಹನದಟ್ಟಣೆ ಉಂಟಾಗುತ್ತಿದೆ. ಮತ್ತೂಂದೆಡೆ ವಿಮಾನ ನಿಲ್ದಾಣದಲ್ಲಿ 2ನೇ ಟರ್ಮಿನಲ್ ಮತ್ತು ರನ್‌ವೇ ನಿರ್ಮಾಣಗೊಳ್ಳುತ್ತಿದ್ದು, ಸಾಮರ್ಥ್ಯ ಆಗಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನೇ ಆದ್ಯತಾ ಕಾರಿಡಾರ್ ಆಗಿ ಕೈಗೆತ್ತಿಕೊಳ್ಳಬೇಕು ಎಂದು ಸಿಟಿ ಜನ್ ಫಾರ್ ಸಿಟಿಜನ್ ಸಂಚಾಲಕ ರಾಜಕುಮಾರ್ ದುಗರ್ ಒತ್ತಾಯಿಸುತ್ತಾರೆ. ಈಚೆಗೆ ಸಂಸ್ಥೆಯು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರನ್ನೂ ಭೇಟಿ ಮಾಡಿ, ಮನವಿ ಸಲ್ಲಿಸಿದೆ.
ನಾಲ್ಕೂಕಾರಿಡಾರ್‌ಗಳನ್ನು ಆರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಇದರಲ್ಲಿ ಯಾವುದನ್ನು “ಆದ್ಯತಾ ಕಾರಿ ಡಾರ್’ ಆಗಿ ಕೈಗೆತ್ತಿಕೊಳ್ಳಬೇಕು ಎನ್ನುವುದು ಸರ್ಕಾರದ ಮಟ್ಟ ದಲಿ ತೀರ್ಮಾನ ಆಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪೆನಿ) ಅಧಿಕಾರಿಯೊಬ್ಬರು ತಿಳಿಸುತ್ತಾರೆ. “ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಅಥವಾ ಭೂಮಿಯ ಸಮಸ್ಯೆ ಇಲ್ಲ. ಶೀಘ್ರದಲ್ಲೇ ಯೋಜನೆಕೈಗೆತ್ತಿಕೊಳ್ಳಲಾಗುವುದು’ ಎಂದು ಕೆ-ರೈಡ್ ಮುಖ್ಯಸ್ಥ ಅಮಿತ್ ಗರ್ಗ್ ತಿಳಿಸುತ್ತಾರೆ.
ವಾಹನ ಸವಾರರ ಪರದಾಟ : ಅಂದಹಾಗೆ, ಹೆಬ್ಟಾಳ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ನಡುವೆ “ಪೀಕ್ ಅವರ್’ನಲ್ಲಿ ಪ್ರತಿ ಗಂಟೆಗೆ 24ರಿಂದ 26 ಸಾವಿರ ವಾಹನಗಳು ಸಂಚರಿಸುತ್ತವೆ. ಆ ಮಾರ್ಗದಲ್ಲಿ ಸಂಚರಿಸುವ ಜನ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಂಚಾರದಟ್ಟಣೆ ತಗ್ಗಿಸಲು 2007 ಈವರೆಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಹಲವು ಯೋಜನೆಗಳ ಭರವಸೆ ನೀಡಿದೆ. ಅದರಲ್ಲಿ ಒಂದೇ ಒಂದು ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಪರಿಣಾಮ ಈಗಲೂ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಬಹುತೇಕ ಯೋಜನೆಗಳಹಿಂದೆಹಲವು ರೀತಿಯ ಲಾಬಿಗಳುಕೆಲಸ ಮಾಡುತ್ತವೆ. ಅದರಲ್ಲಿ ಮುಖ್ಯವಾಗಿ ಅಲ್ಪಾವಧಿಯಲ್ಲಿ ಎದ್ದುಕಾಣಬೇಕು ಎನ್ನುವುದಾಗಿರುತ್ತದೆ. ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ಯಾವೊಂದು ಹೊಸ ಯೋಜನೆಗಳೂ ಘೋಷಣೆ ಆಗಿಲ್ಲ. ಈ ಮಧ್ಯೆ ನೆರೆ, ಕೋವಿಡ್ ಹಾವಳಿಯಿಂದ ಇನ್ನಷ್ಟು ನೇಪಥ್ಯಕ್ಕೆ ಸರಿದಂತಾಗಿದೆ. ಇಂತಹ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ (ಬಿಜೆಪಿ ಸರ್ಕಾರ ಇತ್ತು)ದಲ್ಲಿ ಮುಂಬೈ-ಪುಣೆ ನಡುವೆ ನಿರ್ಮಿಸಲು ಘೋಷಣೆಯಾದ ಹೈಪರ್‌ಲೂಪ್‌ಯೋಜನೆ ಇಲ್ಲಿ “ಶಿಫ್ಟ್’ ಆಗಿದೆ ಎನ್ನಲಾಗಿದೆ.
ಭವಿಷ್ಯದ ಬೇಡಿಕೆ, ಅಭಿವೃದ್ಧಿಗೆ ಆದ್ಯತೆ :
- ಬೆಂಗಳೂರನ್ನು ಅದರಲ್ಲೂಕೆಐಎಎಲ್ ನಿಲ್ದಾಣ ಮಾರ್ಗವನ್ನೇ ಆಯ್ಕೆ ಮಾಡಿದ್ದುಯಾಕೆ?
- ಈಗಾಗಲೇ ಉಪನಗರ ರೈಲು, ಮೆಟ್ರೋ ಬರುತ್ತಿದೆ. ಹೀಗಿರುವಾಗ, ಹೈಪರ್ ಲೂಪ್ ಅಪ್ರಸ್ತುತ ಎನಿಸುವುದಿಲ್ಲವೇ?
- ವಿಮಾನ ನಿಲ್ದಾಣ ಮಾರ್ಗ ಈಗಾಗಲೇ ಸಾಕಷ್ಟು ಬೆಳೆದಿದೆ. ಭೂಮಿ ಎಲ್ಲಿಂದ ತರುತ್ತೀರಾ?
- ಯಾವ ಮಾರ್ಗದಲ್ಲಿ ಸಾಧ್ಯಾಸಾಧ್ಯತೆಗಳ ಪರೀಕ್ಷೆ ನಡೆಸಲು ನಿರ್ಧರಿಸಿದ್ದೀರಾ?