Advertisement

ಒಂದು ಲಡ್ಡು ಬೆಲೆ 24.60 ಲಕ್ಷ ರೂ!: ದಾಖಲೆ ಬರೆದ ಬಾಲಾಪುರ ಗಣೇಶನ ಪ್ರಸಾದ

04:09 PM Sep 09, 2022 | Team Udayavani |

ಹೈದರಾಬಾದ್‌: ಅತ್ಯಂತ ಜನಪ್ರಿಯ ಹೈದರಾಬಾದ್‌ನ ಬಾಲಾಪುರ ಗಣಪತಿಯ, 21 ಕೆಜಿಯ  ಲಡ್ಡು ಪ್ರಸಾದ ಈ ಬಾರಿ ಬರೋಬ್ಬರಿ 24. 60 ಲಕ್ಷ ರೂ. ಗೆ ಹರಾಜಾಗಿದೆ. ಸುಮಾರು 21 ಕೆಜಿಯ ಈ ಲಡ್ಡು ಪ್ರಸಾದವನ್ನು ಬಾಲಾಪುರ ಗಣೇಶ ಉತ್ಸವದ ಸಮಿತಿ ಸದಸ್ಯ ಲಕ್ಷ್ಮ ರೆಡ್ಡಿ ಎನ್ನುವವರು ಖರೀದಿಸಿ ದಾಖಲೆ ಬರೆದಿದ್ದಾರೆ.

Advertisement

ಇದನ್ನೂ ಓದಿ:ರಣಬೀರ್ ‘ಬ್ರಹ್ಮಾಸ್ತ್ರ’ ರಿವೀವ್: ವಿಎಫ್ ಎಕ್ಸ್ ಹೆಸರಲ್ಲಿ ‘ಲೇಸರ್ ಶೋ’ ಎಂದ ಜನ

ಸುಮಾರು 10 ಮಂದಿ ಈ ಲಡ್ಡು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, 1,116 ರೂ ಬೆಲೆಯಿಂದ ಈ ಹರಾಜು ಪ್ರಕ್ರಿಯೆ ಆರಂಭವಾಗಿ 24.60 ಲಕ್ಷ ರೂ. ಹರಾಜು ಪ್ರಕ್ರಿಯೆ ಕೊನೆಗೊಂಡಿದೆ.

ಬಾಲಾಪುರ ಗಣೇಶನ ಲಡ್ಡು ಪ್ರಸಾದ ಹರಾಜು ಪ್ರಕ್ರಿಯೆ 1994ರಲ್ಲಿ ಪ್ರಾರಂಭವಾಗಿದ್ದು, ಪ್ರತಿ ವರ್ಷ 9 ದಿನಗಳ ಕಾಲ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸಿ, 9 ನೇ ದಿನ ಲಡ್ಡು ಹರಾಜು ನಡೆಯುತ್ತದೆ. ಕಳೆದ ವರ್ಷ (2021) 21 ಕೆಜಿಯ ಲಡ್ಡು, 18.90 ಲಕ್ಷ ರೂ. ಮಾರಾಟವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next