ಹೈದರಾಬಾದ್:ಕೇಶವಿನ್ಯಾಸಕ್ಕೂ ಮೊದಲು ತಲೆಕೂದಲನ್ನು ತೊಳೆಸಲೆಂದು ಬ್ಯೂಟಿಪಾರ್ಲರ್‌ಗೆ ತೆರಳಿದ್ದ ಹೈದರಾಬಾದ್‌ನ ಯುವತಿಯೊಬ್ಬರು ಅಪರೂಪದ “ಪಾರ್ಶ್ವವಾಯು’ಗೆ ತುತ್ತಾದ ಘಟನೆ ನಡೆದಿದೆ.
50 ವರ್ಷದ ಮಹಿಳೆಯು ತಲೆಕೂದಲು ತೊಳೆಯಲೆಂದು ಕುತ್ತಿಗೆಯನ್ನು ಮುಂದಕ್ಕೆ ಬಾಗಿಸಿದಾಗ, ಮೆದುಳಿಗೆ ರಕ್ತ ಸರಬರಾಜು ಮಾಡುವಂಥ ನರವು ಒತ್ತಿದಂತಾಗಿ, ಪಾರ್ಶ್ವವಾಯು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕುತ್ತಿಗೆಯ ಮುಂಭಾಗದಲ್ಲಿ ಎರಡು, ಹಿಂಭಾಗದಲ್ಲಿ ಎರಡು ಅಪಧಮನಿಗಳು ಇರುತ್ತವೆ.
ಇವುಗಳ ಪಕ್ಕದಲ್ಲಿ ಕುತ್ತಿಗೆಗೆ ಹಾನಿಯಾದರೆ, ಅಪಧಮನಿಯು ಹರಿದಂತಾಗಿ, ರಕ್ತ ಹೆಪ್ಪುಗಟ್ಟಲು ಆರಂಭವಾಗುತ್ತದೆ. ಈ ರೀತಿ ರಕ್ತವು ಹೆಪ್ಪುಗಟ್ಟುವುದರಿಂದ ಮೆದುಳಿಗೆ ರಕ್ತದ ಪೂರೈಕೆಗೆ ತೊಂದರೆಯಾಗಿ, ಸ್ಟ್ರೋಕ್ ಉಂಟಾಗುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.
1993ರಲ್ಲೂ “ಬ್ಯೂಟಿಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್’ ಬಗ್ಗೆ ಅಮೆರಿಕದ ವೈದ್ಯಕೀಯ ಸಂಘದ ನಿಯತಕಾಲಿಕೆಯಲ್ಲಿ ಮಾಹಿತಿ ಪ್ರಕಟವಾಗಿತ್ತು.
Related Articles
ಆ ಸಮಯದಲ್ಲಿ ಬ್ಯೂಟಿ ಸಲೂನ್‌ನಲ್ಲಿ ಹೇರ್‌ವಾಷ್ ಮಾಡಲು ಹೋಗಿದ್ದ ಐವರು ಮಹಿಳೆಯರಲ್ಲಿ ಗಂಭೀರವಾದ ನರಸಂಬಂಧಿ ಸಮಸ್ಯೆ ಉಂಟಾಗಿತ್ತು.
ವಿಪರೀತ ಸುಸ್ತು, ಸಮತೋಲನ ಕಳೆದುಕೊಳ್ಳುವಿಕೆ ಮತ್ತು ಮುಖ ಮರಗಟ್ಟುವ ಸಮಸ್ಯೆ ಇವರಿಗೆ ತಲೆದೋರಿತ್ತು. ಈ ಪೈಕಿ ನಾಲ್ವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು.