Advertisement

11,450 ಟಿಕೆಟ್‌ಗಳು ಏನಾದವು? ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಗೆ ಪ್ರಶ್ನೆ

11:22 PM Sep 25, 2022 | Team Udayavani |

ಹೈದರಾಬಾದ್‌: ರವಿವಾರದ ಭಾರತ-ಆಸ್ಟ್ರೇಲಿಯ ನಡುವಿನ ಅಂತಿಮ ಟಿ20 ಪಂದ್ಯದ ಟಿಕೆಟ್‌ ಮಾರಾಟ ಭಾರೀ ವಿವಾದಕ್ಕೆ ಕಾರಣವಾದದ್ದು ರಹಸ್ಯವೇನಲ್ಲ.

Advertisement

ಟಿಕೆಟ್‌ ಖರೀದಿಸಲು ಹೋದ ಅಭಿಮಾನಿಗಳ ನಡುವೆ ಕಾಲು¤ಳಿತವೂ ಸಂಭವಿಸಿದೆ. ಗಲಾಟೆಯಾಗಿ, ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ ವಿರುದ್ಧ ಎಫ್ಐಆರ್‌ ಕೂಡ ದಾಖಲಾಗಿದೆ. ಇಷ್ಟೆಲ್ಲದರ ನಡುವೆ ಉಳಿದುಕೊಂಡಿರುವ ಪ್ರಶ್ನೆಯೆಂದರೆ, 11,450 ಟಿಕೆಟ್‌ಗಳು ಯಾರ ಪಾಲಾದವು ಎಂಬುದು.

“ರಾಜೀವ್‌ ಗಾಂಧಿ ಮೈದಾನ’ದ ಪ್ರೇಕ್ಷಕರ ಸಾಮರ್ಥ್ಯ ಒಟ್ಟು 38,000. ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ ಕೊಟ್ಟಿರುವ ಅಂಕಿಸಂಖ್ಯೆಗಳ ಪ್ರಕಾರ 26,550 ಟಿಕೆಟ್‌ಗಳು ಮಾರಾಟವಾಗಿವೆ. ಉಳಿದ 11,450 ಟಿಕೆಟ್‌ಗಳು ಏನಾದವು? ಇದು ಪ್ರಶ್ನೆ.

ವರದಿಗಳ ಪ್ರಕಾರ, ಹೈದರಾಬಾದ್‌ ಸಂಸ್ಥೆ, ತನಗೆ ಆಪ್ತರಾಗಿರುವ ಶ್ರೀಮಂತರಿಗೆ, ಗಣ್ಯರಿಗೆ ವಿಐಪಿ ಪಾಸ್‌ಗಳನ್ನು ನೀಡಿದೆ. ಇದರ ಪರಿಣಾಮವೇ ಟಿಕೆಟ್‌ ಖರೀದಿಸಲು ಬಂದ ಅಭಿಮಾನಿಗಳು ಏಟು ತಿನ್ನಬೇಕಾಯಿತು ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next