ಹೈದರಾಬಾದ್: 18 ಮಹಿಳೆಯರನ್ನು ಹತ್ಯೆಗೈದ ಆರೋಪದಡಿಯಲ್ಲಿ ಹೈದರಾಬಾದ್ ಪೊಲೀಸರು 45 ವರ್ಷದ ವ್ಯಕ್ತಿಯೊಬ್ಬನನ್ನು ಮಂಗಳವಾರ (ಜ.26) ಬಂಧಿಸಿದ್ದಾರೆ.
ಮಹಿಳೆಯರ ಸರಣಿ ಕೊಲೆ ಮಾತ್ರವಲ್ಲದೆ ಇತರ ಅಪರಾಧ ಕೃತ್ಯದಲ್ಲೂ ಈತ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲು ಕ್ವಾರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ 21 ವರ್ಷವಿರುವಾಗಲೇ ವಿವಾಹವಾಗಿದ್ದ.
ಆದರೇ ಕೆಲದಿನಗಳಲ್ಲೆ ಪತ್ನಿ ಈತನಿಂದ ದೂರವಾಗಿ ಬೇರೆಯವರನ್ನು ವರಿಸಿದ್ದಳು. ಇದರಿಂದ ಮಹಿಳೆಯರ ಮೇಲೆ ದ್ವೇಷ ಸಾಧಿಸುತ್ತಿದ್ದ ಆರೋಪಿ ಸರಣಿ ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತನಿಖೆಯ ನಂತರ ತಿಳಿಸಿದ್ದಾರೆ.
ಸದ್ಯ 2 ಕೊಲೆ ಆರೋಪ ಸಾಬೀತಾಗಿದ್ದು, 16 ಪ್ರಕರಣಗಳು ತನಿಖೆಯಲ್ಲಿವೆ. ಇದಲ್ಲದೆ ಆಸ್ತಿಗೆ ಸಂಬಂಧಿಸಿದ ಗಲಭೆ ಸೇರಿದಂತೆ ಒಟ್ಟು 21 ಪ್ರಕರಣಗಳು ಈತನ ಮೇಲೆ ದಾಖಲಾಗಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ:ಆಸ್ಟ್ರೇಲಿಯಾದಿಂದ ಹಿಂದಿರುಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿ