Advertisement

ಹೈದರಾಬಾದ್‌: ಮೆಟ್ರೋ ಸ್ಟೇಶನ್‌ನಿಂದ ಹಾರಿದ ಅಪರಿಚಿತ ವ್ಯಕ್ತಿ ಸಾವು

05:14 PM Nov 08, 2018 | Team Udayavani |

ಹೈದರಾಬಾದ್‌ : ನಗರದ ಆಮೀರ್‌ಪೆಟ್‌ ಮೆಟ್ರೋ ಸ್ಟೇಶನ್‌ನ ಮೊದಲ ಮಹಡಿಯಿಂದ ಕೆಳಗೆ ಹಾರಿದ ಅಪರಿಚಿತ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಗುರುವಾರ ನಡೆದಿದೆ. 

Advertisement

ಒಂದೇ ವಾರದ ಅವಧಿಯೊಳಗೆ ನಡೆದಿರುವ ಏಕ ಪ್ರಕಾರದ ಎರಡನೇ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಳೆದ ಮಂಗಳವಾರ ನಗರದ ವಿಕ್ಟೋರಿಯಾ ಮೆಮೋರಿಯಲ್‌ ಮೆಟ್ರೋ ಸ್ಟೇಶನ್‌ ನಲ್ಲಿ ಮಹಿಳೆಯೊಬ್ಬಳು ಕೆಳಗೆ ಹಾರಿದ್ದಳು.

ಗಂಭೀರವಾಗಿ ಗಾಯಗೊಂಡಿದ್ದ ಆಕೆ ಕೊನೆಗೂ ಬದಕುಳಿದಿದ್ದಳು. ಕೌಟುಂಬಿಕ ಸಮಸ್ಯೆಗಳಿಂದಾಗಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದೆನೆಂದು ಆಕೆ ಅನಂತರ ಹೇಳಿದ್ದಳು. 

Advertisement

Udayavani is now on Telegram. Click here to join our channel and stay updated with the latest news.

Next