Advertisement

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಲವರು ‘ಹೈದರಾಬಾದ್ ವಿಮೋಚನಾ ದಿನ’ಆಚರಿಸುತ್ತಿಲ್ಲ: ಶಾ ಕಿಡಿ

01:58 PM Sep 17, 2022 | Team Udayavani |

ಹೈದರಾಬಾದ್ : ಹಲವರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹೈದರಾಬಾದ್ ವಿಮೋಚನಾ ದಿನ ಆಚರಿಸುತ್ತಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಶನಿವಾರ ಟಿಆರ್ ಎಸ್ ಮತ್ತು ಓವೈಸಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

Advertisement

ಸೆಪ್ಟೆಂಬರ್ 17, 1948 ರಂದು ನಿಜಾಮ್ ಆಳ್ವಿಕೆಯಲ್ಲಿ ಹಿಂದಿನ ಹೈದರಾಬಾದ್ ರಾಜ್ಯವು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡ ಸಂದರ್ಭವನ್ನು ಗುರುತಿಸಲು ಕೇಂದ್ರ ಸರ್ಕಾರದ ‘ಹೈದರಾಬಾದ್ ವಿಮೋಚನಾ ದಿನ’ದ ಅಧಿಕೃತ ಆಚರಣೆಯಲ್ಲಿ ಶಾ ಅವರು ಮಾತನಾಡಿ, ”ತೆಲಂಗಾಣದಲ್ಲಿ ಇಷ್ಟು ವರ್ಷಗಳ ಕಾಲ ‘ಹೈದರಾಬಾದ್‌ ವಿಮೋಚನಾ ದಿನ’ವನ್ನು ಅಧಿಕೃತವಾಗಿ ಆಚರಿಸದಿರುವುದು ದುರದೃಷ್ಟಕರ ಸಂಗತಿ. ಈ ದಿನವನ್ನು ಸ್ಮರಿಸಲು ನಿರ್ಧರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ : ನಿಜಾಮ ಆಡಳಿತದಲ್ಲಿ ಧ್ವಜ ಹಾರಿಸಿದ್ದ ಸಾಹಸಿಗರು

”ಸರ್ಕಾರದ ಒಪ್ಪಿಗೆಯೊಂದಿಗೆ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಬೇಕು ಎಂಬ ಬೇಡಿಕೆ ಪ್ರದೇಶದಲ್ಲಿದ್ದಾಗ, 75 ವರ್ಷಗಳು ಕಳೆದಿರುವುದು ದುರದೃಷ್ಟಕರ, ಆದರೆ ಇಲ್ಲಿ ಸರ್ಕಾರದಲ್ಲಿದ್ದವರು ವೋಟ್ ಬ್ಯಾಂಕ್ ರಾಜಕಾರಣದಿಂದ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಧೈರ್ಯ ಮಾಡಲಿಲ್ಲ” ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಉಲ್ಲೇಖಿಸಿ, ”ಈ ದಿನವನ್ನು ಸ್ಮರಿಸಲು ಅನೇಕ ಜನರು ಚುನಾವಣೆ ಮತ್ತು ಆಂದೋಲನದ ಸಮಯದಲ್ಲಿ ಭರವಸೆ ನೀಡಿದ್ದರು ಆದರೆ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಮರೆತಿದ್ದಾರೆ” ಎಂದರು.

Advertisement

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಗೆ ಗೌರವ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕರ್ನಾಟಕ ಸಾರಿಗೆ ಸಚಿವ ಬಿ ಶ್ರೀರಾಮುಲು ಭಾಗಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next