ಉಡುಪಿ: ತನ್ನ ನಾಯಿಯ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಹೈದರಬಾದ್ ನ ಯುವತಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಹೈದರಬಾದ್ ನಲ್ಲಿ ಬ್ರೀತ್ ಎನಿಮಲ್ ರೆಸ್ಕ್ಯೂ ಸೆಂಟರ್ ನಡೆಸುತ್ತಿರುವ ಎಸ್. ಸಾಯಿ ಶ್ರೀ ಎಂಬವರಿಂದ ಮಾರ್ಚ್ 06 ರಂದು ಉಡುಪಿಯ ರೀನಾ ಎಂಬವರು ಬ್ಲ್ಯಾಕಿ ಮತ್ತು ಕ್ರೀಂ ಎಂಬ ಹೆಸರಿನ ಎರಡು ನಾಯಿಗಳನ್ನು ದತ್ತು ತೆಗೆದುಕೊಂಡಿದ್ದರು. ಸ್ವಲ್ಪ ದಿನಗಳ ನಂತರ ರೀನಾ ಅವರು ಸಾಯಿಶ್ರೀಗೆ ಕರೆ ಮಾಡಿ ಬ್ಲ್ಯಾಕಿ ನಾಯಿ ಕೆಟ್ಟಗುಣಗಳನ್ನು ಹೊಂದಿದ್ದು, ಅದನ್ನು ವಾಪಸ್ಸು ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಕುಡಿಯುವ ನೀರು ಕೇಳಿದ್ರೆ ಮೊಬೈಲ್ ಸ್ವಿಚ್‌ಆಫ್ ಮಾಡ್ತಾರೆ
ಆದರೆ ವಾಪಸ್ ಮಾಡದೆ ನಾಯಿಯನ್ನು ಬ್ರಹ್ಮಾವರದ ವ್ಯಕ್ತಿಗೆ ಕೊಟ್ಟಿದ್ದು, ಅವರು ಇನ್ನೊಬ್ಬ ವ್ಯಕ್ತಿಗೆ ನಾಯಿಯನ್ನು ಕೊಟ್ಟಿದ್ದಾರೆ. ಬ್ಲ್ಯಾಕಿ ನಾಯಿಯನ್ನು ಸುರಕ್ಷತೆ ಇಲ್ಲದ ಜಾಗಕ್ಕೆ ಸ್ಥಳಾಂತರಿಸಿ ಅಪಾಯ ಸ್ಥಿತಿಗೆ ಸಿಲುಕುವಂತೆ ಮಾಡಲಾಗಿದೆ ಎಂದು ಆರೋಪಿಸಿ ಎಸ್. ಸಾಯಿ ಶ್ರೀ ಅವರು ಪ್ರಾಣಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ.
ಹಿರಿಯ ನಾಗರಿಕರಾದ ರೀನಾ ಅವರನ್ನು ತನಿಖೆಗೆಂದು ಕರೆಯಿಸಿಕೊಳ್ಳುವುದು ಪೊಲೀಸರಿಗೆ ಅಸಾಧ್ಯವಾಗಿದೆ. ಸಾಮಾನ್ಯವಾಗಿ ಉತ್ತಮ ತಳಿಯ ನಾಯಿಗಳು ಕಳೆದು ಹೋದರೆ ಜಾಹೀರಾತು ನೀಡುವುದು, ಸತ್ತರೆ ಶ್ರದ್ಧಾಂಜಲಿ ಅರ್ಪಿಸುವ ಪ್ರೀತಿ ಸಹಜವಾದುದು. ಆದರೆ ಈ ಪ್ರಕರಣದಲ್ಲಿರುವುದು ಬೀದಿನಾಯಿಯಾಗಿದೆ. ಕಪ್ಪು ಬಣ್ಣದ ಈ ನಾಯಿಯನ್ನು ಹುಡುಕುವುದೆಲ್ಲಿ ಎಂಬ ಚಿಂತೆಯಲ್ಲಿದ್ದಾರೆ ಪೊಲೀಸರು!