ತೆಲಂಗಾಣ : ಮುತ್ತಿನ ನಗರಿ ಹೈದರಾಬಾದ್‍ನಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಭಾನುವಾರ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಗಣಪತಿಗೆ ನೈವೆದ್ಯ ಮಾಡಲಾದ ಲಡ್ಡು ಹರಾಜು ಪ್ರಕ್ರಿಯೆ ದೊಡ್ಡ ಮಟ್ಟದದದಲ್ಲಿ ನಡೆದಿದೆ. ಒಂದು ಲಡ್ಡು 48 ಲಕ್ಷ ರೂ.ಗೆ ಹರಾಜು ಆಗಿದೆ.
ಹೈದರಾಬಾದ್ ನಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿಯ ಮತ್ತೊಂದು ವಿಶೇಷ ಏನೆಂದರೆ ‘ಲಡ್ಡು’ ನೈವೆದ್ಯ. ಗಣಪತಿಗೆ ‘ಮೋದಕ’ ಇಷ್ಟ ಎಂದು ಹೇಳುತ್ತಾರೆ. ಆದರೆ, ಇಲ್ಲಿ ‘ಲಾಡು’ ವಿಶೇಷ ಪ್ರಸಾದ್ ವಾಗಿ ಪರಿಗಣಿಸಲಾಗುತ್ತದೆ.
ಹೈದರಾಬಾದಿನ್ ಪ್ರಮುಖ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶನಿಗೆ ನೈವೆದ್ಯ ಹಾಗೂ ಪ್ರಸಾದ ರೂಪದಲ್ಲಿ ಲಡ್ಡುಗಳನ್ನು ಇಡಲಾಗುತ್ತದೆ. ಗಣಪತಿಯ ವಿಸರ್ಜನಾ ದಿನ ಅವುಗಳನ್ನು ಹರಾಜು ಮಾಡಲಾಗುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ನಗರದ ಜನ ಪಾಲ್ಗೊಂಡು ಲಕ್ಷಾಂತರ ರೂ. ನೀಡಿ ಪಡೆದುಕೊಳ್ಳುತ್ತಾರೆ. ಈ ವರ್ಷವು (ಭಾನುವಾರ) ಕೂಡ ಇಲ್ಲಿಯ ರಾಜೇಂದ್ರ ನಗರದ ಕೀರ್ತಿ ರಿಚ್ಮಂಡ್ ಸರ್ಕಲ್‍ನಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ಲಡ್ಡು 48 ಲಕ್ಷ ರೂಪಾಯಿಗೆ ಹರಾಜು ಆಗಿದೆ. ಗೇಟೆಡ್ ಸಮುದಾಯದ 82 ನಿವಾಸಿಗಳು ಹರಾಜಿನಲ್ಲಿ ಭಾಗವಹಿಸಿದ್ದರು. ಅವರಲ್ಲಿ ಒಬ್ಬರು ಲಡ್ಡುವನ್ನು 48 ಲಕ್ಷ ರೂ.ಗೆ ಪಡೆದುಕೊಂಡರು. ಕಳೆದ ವರ್ಷ ಈ ಗಣಪತಿಯ ಲಡ್ಡು 27.3 ಲಕ್ಷಕ್ಕೆ ಹರಾಜಾಗಿತ್ತು, 2019 ರಲ್ಲಿ 18.7 ಲಕ್ಷ ರೂ.ಗೆ ಬಿಡ್ ಆಗಿತ್ತು. ಅದರಂತೆ ಬಲಾಪುರ ಗಣತಪಿ ಲಡ್ಡು 18.90 ಲಕ್ಷ ರೂ.ಗೆ ಹರಾಜು ಆಗಿದೆ. ಶಶಾಂಕ್ ರೆಡ್ಡಿ ಎಂಬುವರು ಈ ಲಡ್ಡು ಪಡೆದುಕೊಂಡಿದ್ದಾರೆ.
ಇನ್ನು ಬಿಡ್‍ನಲ್ಲಿ ಲಡ್ಡು ಪಡೆದವರಿಗೆ ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆ ಇದೆ. 1994 ರಿಂದ ಲಡ್ಡು ಹರಾಜು ನಡೆದುಕೊಂಡು ಬರುತ್ತಿದೆ. 1994 ರಲ್ಲಿ ನಡೆದ ಮೊದಲು ಹರಾಜು ಪ್ರಕ್ರಿಯೆಲ್ಲಿ 450ರೂ.ಗೆ ಒಂದು ಲಡ್ಡು ಮಾರಾಟ ಆಗಿತ್ತು.