Advertisement

Hyderabad: ಡಾಬರ್‌ ನಾಯಿ ದಾಳಿ; ಜೀವ ರಕ್ಷಿಸಲು ಮೂರನೇ ಮಹಡಿಯಿಂದ ಹಾರಿದ ಡೆಲಿವರಿ ಏಜೆಂಟ್

10:50 AM May 23, 2023 | Team Udayavani |

ಹೈದರಾಬಾದ್:  ಡೆಲಿವರಿ ಸಾಮಾಗ್ರಿಯನ್ನು ಗ್ರಾಹಕನ ಮನೆಗೆ ತಲುಪಿಸುವ ವೇಳೆ ಮನೆಯ ನಾಯಿಯೊಂದು ಅಟ್ಟಾಡಿಸಿಕೊಂಡು ಬಂದ ಪರಿಣಾಮ ಮೂರನೇ ಮಹಡಿಯಿಂದ ಡೆಲಿವರಿ ಏಜೆಂಟ್ ಹಾರಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Advertisement

ಹೈದರಾಬಾದ್‌ನ ಪಂಚವಟಿ ಕಾಲೋನಿಯಲ್ಲಿರುವ ಶ್ರೀನಿಧಿ ಹೈಟ್ಸ್ ಅಪಾರ್ಟ್‌ಮೆಂಟ್ ನ ಮೂರನೇ ಮಹಡಿಯಲ್ಲಿ ಗ್ರಾಹಕನ ಮನೆಗೆ ಹಾಸಿಗೆಯನ್ನು ಡೆಲಿವರಿಯ ಮಾಡಲು ಹೋಗಿದ್ದಾರೆ. ಈ ವೇಳೆ ಗ್ರಾಹಕನ ಮನೆಯ ಬಾಗಿಲನ್ನು ಬಡಿದಾಗ ಡಾಬರ್‌ಮನ್ ನಾಯಿ ಬೊಗಳಲು ಶುರು ಮಾಡಿದೆ.

ನಾಯಿಯನ್ನು ಕಟ್ಟದೆ ಇರುವ ಕಾರಣ ನೇರವಾಗಿ ಡೆಲಿವರಿ ಏಜೆಂಟ್‌ ನ ಬಳಿ ಬಂದಿದೆ. ಜೀವ ಭಯದಿಂದ ಡೆಲಿವರಿ ಏಜೆಂಟ್‌ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಸ್ಥಳೀಯರು ಗಂಭೀರ ಗಾಯಗೊಂಡವನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ʼThe Kerala Storyʼ ನೋಡಿದ ಬಳಿಕ ಪ್ರಿಯತಮೆಯ ಧರ್ಮ ಬದಲಾಯಿಸಲು ಒತ್ತಡ ಹೇರಿ ದೌರ್ಜನ್ಯ

ರಾಯದುರ್ಗಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಘಟನೆ ಸಂಬಂಧ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯೂಯು) ಪ್ರಕಟಣೆಯಲ್ಲಿ ನಾಯಿಯ ಮಾಲೀಕರು ವಿತರಣಾ ಕಾರ್ಯನಿರ್ವಾಹಕರ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿದೆ.‌

ಇದೇ ವರ್ಷದ ಜನವರಿಯಲ್ಲಿ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಇಂಥದ್ದೇ ಘಟನೆ ನಡೆದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next