Advertisement

Hyderabad airport : ದುಬೈ ಪ್ರಯಾಣಿಕನ ಬಳಿ 1 ಕೋಟಿ ವಿದೇಶಿ ಕರೆನ್ಸಿ

05:56 AM Jan 09, 2019 | udayavani editorial |

ಹೈದರಾಬಾದ್‌ : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಇಂದು ಬುಧವಾರ ಪ್ರಯಾಣಿಕರೋರ್ವರಿಂದ 1 ಕೋಟಿ ರೂ. ಗಳಿಗೂ ಮೀರಿದ ಏಳು ದೇಶಗಳ ಕರೆನ್ಸಿ ಇರುವುದನ್ನು ಪತ್ತೆ ಹಚ್ಚಿ  ವಶಪಡಿಸಿಕೊಳ್ಳಲಗಿದೆ ಎಂದು ಸಿಐಎಸ್‌ಎಫ್ ಹೇಳಿದೆ. 

Advertisement

ಪ್ರಯಾಣಿಕರ ಬ್ಯಾಗುಗಳನ್ನು ಪರಿಶೀಲಿಸಿದಾಗ ದುಬೈಗೆ ಹೊರಟಿದ್ದ ಪ್ರಯಾಣಿಕನ ಚೀಲದಲ್ಲಿ ಅಂದಾಜು 1.25 ಕೋಟಿ ರೂ ಮೌಲ್ಯದ ಏಳು ದೇಶಗಳ ದಾಖಲೆ ಇಲ್ಲದ ಕರೆನ್ಸಿಗಳು ಪತ್ತೆಯಾದವು. 

ಯುಎಇ ಧಿರಾಮ್‌ ಗಳು, ಸೌದಿ ರಿಯಾಲ್‌ ಗಳು, ಕುವೆಟಿ ದಿನಾರ್‌ಗಳು ಮತ್ತು ಅಮೆರಿಕನ್‌ ಡಾಲರ್‌ಗಳು ವಿದೇಶಿ ಕರೆನ್ಸಿಗಳಲ್ಲಿ ಇದ್ದವು.

ಸಿಐಎಸ್‌ಎಫ್ ಅಧಿಕಾರಿಗಳು ಪ್ರಯಾಣಿಕನನ್ನು ಮತ್ತು ಆತನ ಬಳಿ ಇದ್ದ ಕರೆನ್ಸಿಯನ್ನು ಕಸ್ಟಮ್ಸ ಅಧಿಕಾರಿಗಳಿಗೆ ಒಪ್ಪಿಸಿದರು. ತನಿಖೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next