Advertisement

ನಕಲಿ ಆಧಾರ್‌ ಜೊತೆ ಕೊಚ್ಚಿಯಲ್ಲಿದ್ದ ಆಫ್ಘನ್‌ ಪ್ರಜೆಯ ಬಂಧನ

07:52 PM Jul 21, 2021 | Team Udayavani |

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿರುವ ಕೊಚಿನ್‌ ಹಡಗು ನಿರ್ಮಾಣ ಸಂಸ್ಥೆಯಲ್ಲಿ (ಸಿಎಸ್‌ಎಲ್‌), ಭಾರತಕ್ಕೆ ಸಂಬಂಧಿಸಿದ ಹಲವಾರು ನಕಲಿ ಪ್ರಮಾಣಪತ್ರಗಳೊಂದಿಗೆ ಕೆಲಸ ಗಿಟ್ಟಿಸಿಕೊಂಡಿದ್ದ ಆಫ್ಘಾನಿಸ್ತಾನದ ಪ್ರಜೆಯೊಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತನನ್ನು ಅಬ್ಟಾಸ್‌ ಅಲಿಯಾಸ್‌ ಈದ್ಗುಲ್‌ ಎಂದು ಗುರುತಿಸಲಾಗಿದ್ದು, ಈತ ಅಫ್ಘಾನಿಸ್ತಾನದಿಂದ ನೇಪಾಳಕ್ಕೆ, ಅಲ್ಲಿಂದ ಅಸ್ಸಾಂಗೆ ಬಂದಿದ್ದ. ಅಸ್ಸಾಂನಲ್ಲಿದ್ದಾಗಲೇ ಶಾಲಾ ಪ್ರಮಾಣಪತ್ರಗಳು ಹಾಗೂ ನಕಲಿ ಆಧಾರ್‌ ಕಾರ್ಡ್‌ಗಳನ್ನು ಸಂಪಾದಿಸಿಕೊಂಡ ಆತ, ಆನಂತರ ಕೊಚ್ಚಿಗೆ ಆಗಮಿಸಿ, ಸಿಎಸ್‌ಎಲ್‌ ಕಂಪನಿಯಲ್ಲಿ ಸೇವೆಗೆ ಸೇರಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಈತನ ಕೆಲವು ಸಂಬಂಧಿಕರೂ ಸಿಎಸ್‌ಎಲ್‌ನಲ್ಲಿ ಈಗಾಗಲೇ ಸೇವೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಹಾಗಾಗಿ, ಅಬ್ಟಾಸ್‌ನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಕೇರಳದ ಮೊದಲ ತೃತೀಯ ಲಿಂಗಿ ಆರ್‌ಜೆ ಅನನ್ಯಾ ಕುಮಾರಿ ಆತ್ಮಹತ್ಯೆ

ಸುಳಿವು ಸಿಕ್ಕಿದ್ದು ಹೇಗೆ?
ಜೂನ್‌ ತಿಂಗಳಲ್ಲಿ ಕೊಚ್ಚಿ ಬಳಿಯ ವಿಲ್ಲಿಂಗ್ಟನ್‌ ದ್ವೀಪ, ಗೋಶ್ರೀ ಸೇತುವೆಗಳ ಮೇಲೆ ಡ್ರೋನ್‌ ಒಂದು ಹಾರಾಟ ನಡೆಸಿತ್ತು. ಈ ಪ್ರಾಂತ್ಯದಲ್ಲಿ ಭಾರತೀಯ ನೌಕಾಪಡೆಯ ದಕ್ಷಿಣ ಕೇಂದ್ರ, ಸಿಎಸ್‌ಎಲ್‌ ಕಂಪನಿ ಹಾಗೂ ಕಂಪನಿಯ ಸಿಬ್ಬಂದಿ ವಸತಿ ಗೃಹಗಳಿವೆ. ಹಾಗಾಗಿ, ಪೊಲೀಸರು ಡ್ರೋನ್‌ ಜಾಡು ಹಿಡಿದು ತನಿಖೆ ನಡೆಸಿದ್ದರು. ಆಗ, ಆಫ್ಘನ್‌ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿತ್ತೆಂದು ಹೇಳಲಾಗಿದೆ. ಆದರೆ, ಡ್ರೋನ್‌ಗೂ ಈತನಿಗೂ ಸಂಬಂಧ ಇದೆಯೇ ಎಂಬುದಿನ್ನೂ ತಿಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next