Advertisement

ದುರ್ಗೆ, ಮೇರಿ ಮಾತೆ ಮೂರ್ತಿ ಹಾನಿಗೊಳಿಸಿದ ಮುಸ್ಲಿಂ ಮಹಿಳೆಯರು ವಶಕ್ಕೆ

08:24 PM Sep 27, 2022 | Team Udayavani |

ಹೈದರಾಬಾದ್‌: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಖೈರತಾಬಾದ್‌ ಪ್ರದೇಶದಲ್ಲಿ ದುರ್ಗಾ ಮಾತೆಯ ಮೂರ್ತಿ ಮತ್ತು ವರ್ಜಿನ್‌ ಮೇರಿ ಮೂರ್ತಿ ಹಾನಿಗೊಳಿಸಿದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ದೇಶಾದ್ಯಂತ ಪಿಎಫ್ಐ ಮೇಲೆ ದಾಳಿ ಬೆನ್ನಲ್ಲೇ ಈ ಘಟನೆ ಜರುಗಿದೆ. ಆದರೆ ಪಿಎಫ್ಐಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ವಿಚಾರಣೆಗೆ ಮಹಿಳೆಯರು ಸಹಕರಿಸುತ್ತಿಲ್ಲ. ಯಾವುದೇ ಮಾಹಿತಿ ನೀಡುತ್ತಿಲ್ಲ. ಅವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಪೊಲೀಸ್‌ ಠಾಣೆಯ ಎದರು ಪ್ರತಿಭಟನೆ ನಡೆಸಿದ್ದಾರೆ.

ಈ ಇಬ್ಬರು ಮಹಿಳೆಯರು ಸಹೋದರಿಯರಾಗಿದ್ದು, 22ರಿಂದ 30 ವರ್ಷದವರಾಗಿದ್ದಾರೆ. ಮೊದಲಿಗೆ ಈ ಇಬ್ಬರು ಚರ್ಚ್‌ ಹೊರಗೆ ಇದ್ದ ವರ್ಜಿನ್‌ ಮೇರಿ ಮೂರ್ತಿಯನ್ನು ಹಾನಿಗೊಳಿಸಿದ್ದಾರೆ. ನಂತರ ನವರಾತ್ರಿ ಪೆಂಡಾಲ್‌ಗೆ ನುಗ್ಗಿ ಸುತ್ತಿಗೆಯಿಂದ ದುರ್ಗಾ ಮಾತೆ ಮೂರ್ತಿ ಹಾನಿಗೊಳಿಸಿದ್ದಾರೆ. ತಡೆಯಲು ಬಂದ ಪೆಂಡಾಲ್‌ ಸಮಿತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next