Advertisement

ಭೌತಿಕ ವಿಚಾರಣೆಗೆ “ಸುಪ್ರೀಂ’ಸೂಚನೆ

10:23 PM Oct 08, 2021 | Team Udayavani |

ನವದೆಹಲಿ: ಹೈಬ್ರೀಡ್ ಮಾದರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದು ಅಷ್ಟಾಗಿ ಪರಿಣಾಮಕಾರಿಯಾದ ವಿಧಾನವಲ್ಲದ ಕಾರಣ, ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಎಲ್ಲಾ ಪ್ರಕರಣಗಳ ವಿಚಾರಣೆ, ವಾದಿ-ಪ್ರತಿವಾದಿಗಳ ಭೌತಿಕ ಉಪಸ್ಥಿತಿಯಲ್ಲೇ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ನ್ಯಾಷನಲ್‌ ಫೆಡರೇಷನ್‌ ಆಫ್ ಸೊಸೈಟೀಸ್‌ ಫಾರ್‌ ಫಾರ್ಸ್‌ ಜಸ್ಟೀಸ್‌ ಆ್ಯಂಡ್‌ ಎಮಿನೆಂಟ್‌ ಸಿಟಿಜನ್ಸ್‌ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಹಾಗೂ ಬಿ.ಆರ್‌. ಗವಾಯಿ ಅಭಿಪ್ರಾಯಪಟ್ಟಿದ್ದಾರೆ.

“ಆದಷ್ಟು ಬೇಗನೇ ಎಲ್ಲಾ ನ್ಯಾಯಾಲಯಗಳೂ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ಶುರು ಮಾಡಬೇಕು ಹಾಗೂ ಸಂಬಂಧಪಟ್ಟ ನಾಗರಿಕರಿಗೆ ಈ ವಿಚಾರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬದಲಿ ಇಂಧನ ಬಳಕೆ ಮಾಡಿದರೆ ದೇಶ ಐದು ವರ್ಷಗಳಲ್ಲಿ ನಂ1

Advertisement

Udayavani is now on Telegram. Click here to join our channel and stay updated with the latest news.

Next