ಯಡ್ರಾಮಿ: ಶಿಕ್ಷಣದ ಪ್ರಗತಿಯಲ್ಲಿ ಶಿಕ್ಷಕನ ಪಾತ್ರ ತುಂಬಾ ಮುಖ್ಯ. ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ನೇಮಕವಾಗಿ, ಮಕ್ಕಳಿಗೆ ಗುಣಾತ್ಮಕ ಪಾಠ ಬೋಧನೆಯತ್ತ ಮುತುವರ್ಜಿ ವಹಿಸಿ, ಶಿಕ್ಷಣದ ಪ್ರಗತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಶಿಕ್ಷಕರು ವಿರಳ. ಇಂತಹ ಸಾಲಿನಲ್ಲಿ ಯಡ್ರಾಮಿ ತಾಲೂಕಿನ ವಡಗೇರಿ ಮೂಲದ ಬಸನಾಳ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಹುಸೇನ್ ವಡಗೇರಿ ಸೇರುತ್ತಾರೆ.
ಕಳೆದ ಎರಡು ದಿನಗಳ ಹಿಂದೆ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಪ್ರಕಟಪಡಿಸಿದ2022-23ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಹುಸೇನ್ ವಡಗೇರಿ ಭಾಜನರಾಗಿದ್ದರಿಂದ ವಡಗೇರಿ, ಬಸನಾಳ ಗ್ರಾಮವಲ್ಲದೇ ತಾಲೂಕಿನ ಶಿಕ್ಷಕ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ.
ಮೊದಲಿಗೆ ಉಡುಪಿ ಜಿಲ್ಲೆಯಿಂದ ಪ್ರಾರಂಭವಾದ ಶಿಕ್ಷಕ ವೃತ್ತಿ ನಂತರ ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿಯಲ್ಲಿ ಆರಂಭವಾಯಿತು. ಅಲ್ಲಿಂದ ಕಲಬುರಗಿ ತಾಲೂಕಿನ ಬಸನಾಳ ಸರ್ಕಾರಿ ಪ್ರಾಥಮಿಕ ಶಾಲೆಗೆವರ್ಗವಾಗಿಬಂದರು.ಈಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿಸಿ, ಸದ್ಯ ಇದೇ ಶಾಲೆಯಲ್ಲಿ ಹುಸೇನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹುಸೇನ್ ವಡಗೇರಿ 15 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ವಿದ್ಯಾರ್ಥಿ ಸಮೂಹ ಹಾಗೂ ಶಿಕ್ಷಣ ಇಲಾಖೆಯ ಕಿರಿ-ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡ ಹುಸೇನ್ ಇತರ ಶಿಕ್ಷಕರಿಗೂ ಮಾದರಿಯಾಗಿದ್ದಾರೆ.
ಕೊರೊನಾ ಕಾಲದಲ್ಲಿಯೂ “ನಲಿ ಕಲಿ’ ಯೋಜನೆಯನ್ನು ಆನ್‌ಲೈನ್ ಮೂಲಕ ರಾಜ್ಯಮಟ್ಟದಲ್ಲಿ ಯಶಸ್ವಿಗೊಳಿಸುವಲ್ಲಿ ವಡಗೇರಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಶುಭ ಹಾರೈಕೆ: ವಡಗೇರಿ ಮೂಲದ ಬಸನಾಳ ಸರ್ಕಾರಿ ಶಾಲೆ ಶಿಕ್ಷಕರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ಗ್ರಾಮದ ಕೀರ್ತಿ ಹೆಚ್ಚಿಸಿದೆ. ಸಜ್ಜನ, ಸರಳ ವ್ಯಕ್ತಿತ್ವ ಹೊಂದಿದ ಹುಸೇನ್ ಮಾಸ್ತರ ಎಲ್ಲರೊಂದಿಗೆ ಬೆರೆಯುವ ಗುಣವುಳ್ಳವರು. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಮುಡಿಗೇರಲಿ ಎಂದು ಶುಭ ಹಾರೈಸುತ್ತೇವೆ ಎಂದು ಗ್ರಾಮದ ಮುಖಂಡರಾದ ಶಂಕರಗೌಡ ಪೊಲೀಸ್‌ಪಾಟೀಲ, ಯಡ್ರಾಮಿ ನಿವೃತ್ತ ಶಿಕ್ಷಕ ದಸ್ತಗೀರ ಚೌಧರಿ
ತಿಳಿಸಿದ್ದಾರೆ.
ನನ್ನನ್ನು ಶಿಕ್ಷಣ ಇಲಾಖೆ ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿದ್ದು ಸಂತೋಷ ತಂದಿದೆ. ನಾನುಯಾವತ್ತೂ ಶಿಕ್ಷಕನಾಗಿಯೇ ಇದ್ದುಕೊಂಡು, ಪ್ರಾಮಾಣಿಕವಾಗಿ ನನ್ನ ಕರ್ತವ್ಯದಲ್ಲಿ ನಿರತನಾಗಿರಬೇಕೆನ್ನುವಹಿರಿದಾಸೆ ಉಳ್ಳವನು.ಕಲಬುರಗಿ ಶಿಕ್ಷಕರ ಸಂಘದ ಅಧ್ಯಕ್ಷರಿಗೆ, ಜಿಲ್ಲೆಯಹಿರಿಯ ಅಧಿಕಾರಿಗಳಿಗೆ ಧನ್ಯವಾದ.
∙ಹುಸೇನ್‌ವಡಗೇರಿ,
ರಾಜ್ಯ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ
*ಸಂತೋಷ ಬಿ. ನವಲಗುಂದ