ಹುಣಸೂರು: ಸಾಲಬಾಧೆಗೆ ಹೆದರಿದ ರೈತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾ.ಪಂ.ವ್ಯಾಪ್ತಿಯ ವೀರನಹೊಸಳ್ಳಿಯ ಲಕ್ಕೇಗೌಡರವರ ಪತ್ನಿ ಲಕ್ಷ್ಮಮ್ಮ (
65) ಮೃತ ದುರ್ದೈವಿ. ಮೃತರಿಗೆ ಪತಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಇವರು ಸೋಮವಾರದಂದು ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರ ಹೋಗಿದ್ದು ಮಂಗಳವಾರದಂದು ಪಿರಿಯಾಪಟ್ಟಣ ಪಟ್ಟಣ ಹತ್ತಿರದ ಕೆರೆಯಲ್ಲಿ ಶವ ಪತ್ತೆಯಾಗಿದೆ.
ಮೃತರು ತಮ್ಮ ಜಮೀನಿನಲ್ಲಿ ಮುಸುಕಿನ ಜೋಳ, ರಾಗಿ ಮತ್ತು ಶುಂಠಿ ಬೆಳೆಯನ್ನು ಬೆಳೆದಿದ್ದರು. ಈ ಬೇಸಾಯಕ್ಕೆಂದು ಮೃತರ ಪತಿ ಲಕ್ಕೆಗೌಡರ ಹೆಸರಿನಲ್ಲಿ ಹನಗೋಡಿನ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 7 ಲಕ್ಷ ರೂ ಸಾಲ ಮಾಡಿದ್ದರು. ಅಲ್ಲದೆ ಖಾಸಗಿ ಲೇವಾದೇವಿ ಸಂಸ್ಥೆ ಹಾಗೂ ಗ್ರಾಮದ ಮಹಿಳಾ ಸಂಘಳಲ್ಲಿ ಐದು ಲಕ್ಷ ಸೇರಿ ೧೨ ಲಕ್ಷರೂ ಸಾಲ ಮಾಡಿದ್ದರು. ಬೆಳೆಯಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮಾಡಿದ ಸಾಲವನ್ನು ತೀರಿಸಲಾಗದೆ ಪತಿಯ ಚಿಕಿತ್ಸೆಗೆ ಹಣ ಹೊಂದಿ ಸಲಾಗದೆಲಾತಂಕಗೊಂಡಿದ್ದ ಇವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ಪುತ್ರ ಶಿವು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರಿಶ್ ಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸ್ವಗ್ರಾಮ ವೀರನಹೊಸಹಳ್ಳಿಯ ಅವರ ಜಮೀನಿನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ದೊಡ್ಡಹೆಜ್ಜೂರು ಗ್ರಾಂ.ಪಂ.ಅಧ್ಯಕ್ಷ ಮುದಗನೂರುಸುಭಾಶ್, ಸದಸ್ಯರಾದ ವೆಂಕಟೇಶ್, ಕುಮಾರ್, ಶ್ರೀನಿವಾಸ್ ಮುಂತಾದವರು ಪಾಲ್ಗೊಂಡಿದ್ದರು.