Advertisement

ಪತ್ನಿಗೆ ಲಿಫ್ಟ್ ನಲ್ಲೇ ತಲಾಕ್‌ ಕೊಟ್ಟ ಪತಿ!

12:27 PM Jul 30, 2022 | Team Udayavani |

ಬೆಂಗಳೂರು: ವಿವಾಹವಾದ ನಂತರ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿರಾಯಯೊಬ್ಬ ಲಿಫ್ಟ್ ನಲ್ಲೇ ಪತ್ನಿಗೆ ತಲಾಕ್‌ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಪತಿ ಮಹಮ್ಮದ್‌ ಅಕ್ರಂ ಎಂಬಾತನ ವಿರುದ್ಧ ಪತ್ನಿ ಸುದ್ದು ಗುಂಟೆಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 30 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವರದಕ್ಷಿಣೆಯಾಗಿ

ಪಡೆದು ವಿವಾಹವಾಗಿದ್ದ. ರಂಜಾನ್‌ ಹಬ್ಬಕ್ಕೆಂದು ತವರಿಗೆ ತೆರಳಿದ್ದಾಗ 10 ಲಕ್ಷ ರೂ. ತರುವಂತೆ ಪತಿ ಪೀಡಿಸುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು ಹಣ ಕೊಡುವಂತೆ ಪೀಡಿಸಿದ್ದ. ಹಣ ಇಲ್ಲ ಎಂದಾಗ ಲಿಫ್ಟ್ ನಲ್ಲೇ ತಲಾಕ್‌ ಎಂದು ಹೇಳಿ ಅಪಾರ್ಟ್‌ಮೆಂಟ್‌ನಿಂದ ಹೊರದಬ್ಬಿ ದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

…………………………………………………………………………………………………………………………..

ಡ್ರಾಪ್‌ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪೇದೆ ಬಂಧನ : 

Advertisement

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಅಪ್ರಾಪ್ತೆಯನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಗೋವಿಂದರಾಜನಗರ ಪೊಲೀಸ್‌ ಠಾಣೆಯ ಕಾನ್‌ ಸ್ಟೇಬಲ್‌ ನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪವನ್‌ ದ್ಯಾವಣ್ಣನವರ್‌ ಬಂಧಿತ ಕಾನ್‌ಸ್ಟೆàಬಲ್‌. ಚಾಮರಾಜನಗರ ಮೂಲದ ಯುವಕನನ್ನು ಅಪ್ರಾಪ್ತೆ ಪ್ರೀತಿಸುತ್ತಿದ್ದಳು. ಜು.27ರಂದು ಮನೆ ತೊರೆದಿದ್ದ ಬಾಲಕಿ ಕೆ.ಪಿ.ಅಗ್ರಹಾರದ ಸಮೀಪದ ಪಾರ್ಕ್‌ನಲ್ಲಿ ಓಡಾಡುತ್ತಿದ್ದಳು. ಕರ್ತವ್ಯದಲ್ಲಿದ್ದ ಪವನ್‌ ಆಕೆಯನ್ನು ಗಮನಿಸಿ ಆಕೆಯ ಬಳಿ ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದ್ದ. ಆಕೆ ಚಾಮರಾಜನಗರಕ್ಕೆ ಹೋಗಬೇಕೆಂದು ಹೇಳಿದ್ದಳು. ಡ್ರಾಪ್‌ ಕೊಡುವುದಾಗಿ ನಂಬಿಸಿ ಆಕೆಯನ್ನು ಮನೆಗೆ ಕರೆದೊಯ್ದು ಪವನ್‌ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next