ಜಾರ್ಖಂಡ್: ಪತ್ನಿಯ ಜೊತೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದ ಯುವಕನನ್ನು ಪತಿಯೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಜಾರ್ಖಂಡ್‌ನ ಲೊಂಜೋ ಗ್ರಾಮದಲ್ಲಿ ನಡೆದಿದೆ.
ವಿಶ್ವನಾಥ ಸುಂಡಿ ಕಳೆದ ಕೆಲ ಸಮಯದಿಂದ ಪತ್ನಿಯನ್ನು ಸಂಶಯಸ್ಪದ ರೀತಿಯಲ್ಲಿ ನೋಡುತ್ತಿದ್ದ, ಪತ್ನಿ ಏನೋ ಮುಚ್ಚಿಡುತ್ತಿದ್ದಾಳೆ ಎನ್ನುವುದನ್ನು ಪತ್ತೆ ಹಚ್ಚುವ ಸಲುವಾಗಿ ಶುಕ್ರವಾರ ಆಕೆಯ ಹಿಂದೆಯೇ ಬಿದ್ದಿದ್ದಾನೆ. ಈ ವೇಳೆ ಪಕ್ಕದ ಗ್ರಾಮದ ಶ್ಯಾಮಲಾಲ್ ಹೆಂಬ್ರಾಂ ಎಂಬ ಯುವಕನ ಜೊತೆ ಪತ್ನಿ ಅಕ್ರಮವಾಗಿ ಸಂಬಂಧವನ್ನಿಟ್ಟುಕೊಂಡಿರುವುದನ್ನು ನೋಡಿದ್ದಾನೆ.
ಇಬ್ಬರನ್ನು ಒಟ್ಟಿಗೆ ನೋಡಿದ ಬಳಿಕ ಆಕ್ರೋಶಗೊಂಡ ವಿಶ್ವನಾಥ ಸುಂಡಿ ಶ್ಯಾಮಲಾಲ್ ಹೆಂಬ್ರಾಂನನ್ನು ಎಳೆದು ಹಲ್ಲೆಗೈದು, ಮರಕ್ಕೆ ಕಟ್ಟಿ ಹಾಕಿದ್ದಾನೆ. ಆ ಬಳಿಕ ಕೊಡಲಿಯಲ್ಲಿ ಆತನ ತಲೆಯನ್ನೇ ಕತ್ತರಿಸಿದ್ದಾನೆ.
ಮರುದಿನ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿಯನ್ನು ಬಂಧಿಸಿದ್ದಾರೆ.