Advertisement

ಪತಿ ಮರ್ಮಾಂಗ ಕತ್ತರಿಸಿದಳು!

07:05 AM Jul 22, 2017 | Team Udayavani |

ವೆಲ್ಲೋರ್‌: ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ತನ್ನ ಶೀಲ ಶಂಕಿಸಿದ ಪತಿಯ ಮರ್ಮಾಂಗ ಕತ್ತರಿಸಿ, ಅದನ್ನು ತವರು ಮನೆಗೆ ಕೊಂಡೊಯ್ಯುತ್ತಿದ್ದ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. “ಪತಿಯ ಮರ್ಮಾಂಗವನ್ನು ಕತ್ತರಿಸಿ, ಅದನ್ನು ಪರ್ಸ್‌ನಲ್ಲಿರಿಸಿಕೊಂಡು ಹೊರಟಿದ್ದ ಮಹಿಳೆಯನ್ನು ಥೂತಿಪಟ್ಟು ಬಳಿ ಬಂಧಿಸಿ, ಕತ್ತರಿಸಿದ ಮರ್ಮಾಂಗವನ್ನು ವಶಕ್ಕೆ ಪಡೆದಿದ್ದೇವೆ,’ ಎಂದು ಗುಡಿಯಟ್ಟಮ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

ಬಂಧಿತ ಮಹಿಳೆ ಸರಸು ಮತ್ತು ಜಗದೀಶನ್‌ ಒಂದೇ ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗ, ಮೂವರು ಹೆಣ್ಣುಮಕ್ಕಳಿದ್ದಾರೆ. ಆದರೆ ಕೌಟುಂಬಿಕ ಕಲಹದಿಂದಾಗಿ ವರ್ಷದ ಹಿಂದೆ ಪತಿಯಿಂದ ದೂರಾದ ಸರಸು, ತವರು ಮನೆ ಸೇರಿದ್ದರು. ಕಡೆಗೆ ಪುತ್ರನ ಕೋರಿಕೆ ಮೇರೆಗೆ ಮತ್ತೆ ಬಂದು ಪತಿ ಜತೆ ವಾಸವಿದ್ದರು. ಗುರುವಾರ ರಾತ್ರಿ ಕೋಪದಲ್ಲೇ ಮನೆಗೆ ಬಂದ ಜಗದೀಶನ್‌, ತವರು ಮನೆಯಲ್ಲಿದ್ದಾಗ ಸರಸು ಬೇರೊಬ್ಬ ವ್ಯಕ್ತಿ ಜತೆ ಸಂಬಂಧ ಹೊಂದಿದ್ದ ಬಗ್ಗೆ ಶಂಕಿಸಿದ್ದಾನೆ. ಅಲ್ಲದೆ, “ನಿನಗೆ ವಯಸ್ಸಾಗಿರುವ ಕಾರಣ ನಾನು ಮತ್ತೂಂದು ಮದುವೆಯಾಗುತ್ತೇನೆ,’ ಎಂದಿದ್ದಾನೆ.

ಈ ಮೂಲಕ ಇಬ್ಬರ ನಡುವೆ ಶುರುವಾದ ಜಗಳ, ನಸುಕಿನ 2 ಗಂಟೆವರೆಗೂ ಮುಂದು ವರಿದಿದೆ. ನಂತರ ಜಗದೀಶನ್‌ ಮಲಗಿದ್ದಾನೆ. ಈ ವೇಳೆ ಅಡುಗೆ ಮನೆಯಿಂದ ಚಾಕು ತೆಗೆ ದು ಕೊಂಡು ಬಂದ ಸರಸು, ಪತಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಆಕ್ರಂದನ ಕೇಳಿಸಿಕೊಂಡ ನೆರೆಮನೆಯವ ರಿಂದ ಮಾಹಿತಿ ಪಡೆದ ಪೊಲೀಸರು, ತವರಿಗೆ ಹೊರಟಿದ್ದ ಸರಸುಳನ್ನು ಮಾರ್ಗಮಧ್ಯೆ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next