Advertisement

Hurun Report: ಮುಂಬಯಿ ಏಷ್ಯಾದ ಹೊಸ ಬಿಲಿಯನೇರ್ಸ್‌ ರಾಜಧಾನಿ

11:47 PM Mar 26, 2024 | Team Udayavani |

ಹೊಸದಿಲ್ಲಿ: 92 ಶತಕೋಟ್ಯಧಿಪತಿಗಳನ್ನು ಹೊಂದಿರುವ ಮುಂಬಯಿ, ಏಷ್ಯಾದ ಹೊಸ “ಬಿಲಿಯನೇರ್‌ ಗಳ ರಾಜಧಾನಿ’ಯಾಗಿ ಹೊರ ಹೊಮ್ಮಿದೆ. ಈ ಮೂಲಕ ಪಟ್ಟಿಯಲ್ಲಿ ಬೀಜಿಂಗ್‌ ನಗರವನ್ನು ಹಿಂದಿಕ್ಕಿದೆ.

Advertisement

ಹುರುನ್‌ ಸಂಶೋಧನ ಸಂಸ್ಥೆಯ ವರದಿ ಪ್ರಕಾರ, 271 ಶತಕೋಟ್ಯಧಿ ಪತಿಗಳನ್ನು ಹೊಂದಿರುವ ಭಾರತ, ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಈ ವರ್ಷ ಹೊಸದಾಗಿ 26 ಬಿಲಿಯನೇರ್‌ಗಳು ಮುಂಬಯಿಯಿಂದ ಹೊರ ಹೊಮ್ಮಿದ್ದಾರೆ. ಈ ಮೂಲಕ ವಿಶ್ವದಲ್ಲಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿ ರುವ ಪಟ್ಟಿಯಲ್ಲಿ ಮುಂಬಯಿ 3ನೇ ಸ್ಥಾನ ಪಡೆದಿದ್ದು, ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದಿದೆ. ಹೊಸದಿಲ್ಲಿ ಮೊದಲ ಬಾರಿಗೆ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಈ ವರ್ಷ ಭಾರತದಲ್ಲಿ ಹೊಸದಾಗಿ 94 ಬಿಲಿಯನೇರ್‌ಗಳು ಉದಯಿಸಿದ್ದು, ವಿಶ್ವದಲ್ಲೇ ಭಾರತ 2ನೇ ಸ್ಥಾನದ ಲ್ಲಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next