Advertisement
ಕುದುರೆಮುಖ ವನ್ಯಜೀವಿ ವಿಭಾಗದ ಕಿಳಂದೂರು ಅರಣ್ಯ ವ್ಯಾಪ್ತಿಯಲ್ಲಿ ಮೂಗ್ಮನೆ ಬಳಿ ಅಳವಡಿಸಿದ ಕೆಮರಾ ಟ್ರಾಪ್‌ನಲ್ಲಿ ಇಬ್ಬರು ಕೋವಿ ಹಿಡಿದು ಅಭಯಾರಣ್ಯ ಪ್ರವೇಶಿಸುವುದು ಕಂಡಿದ್ದು, ಕೂಡಲೇ ಸಿದ್ದಾಪುರ ವನ್ಯಜೀವಿ ವಲಯದವರು ತತ್ ಕ್ಷಣ ಕಾರ್ಯಾಚರಣೆ ನಡೆಸಿ ಹೊಸನಗರ ತಾಲೂಕಿನ ಹಲಸಿನ ಹಳ್ಳಿಯ ಕರಿಮನೆ ಗ್ರಾಮದ ಈರಪ್ಪ ಗೌಡನನ್ನು ಬಂಧಿಸಿದರು. ಜತೆಗಿದ್ದ ಹೊಸನಗರ ತಾಲೂಕು ಜಯನಗರದ ರಾಮಪ್ಪ ಗೌಡ ಪರಾರಿಯಾಗಿದ್ದಾನೆ. ಬಂಧಿತನನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇವು ಅರಣ್ಯ ಇಲಾಖೆಯು ಪ್ರಾಣಿಗಳ ಚಲನವಲನ, ಅವುಗಳ ಗಣತಿ ಹಾಗೂ ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಿಸಲು ಕಾಡಿನಲ್ಲಿ ಅಳವಡಿಸಿರುವ ಕೆಮರಾಗಳು. ಇವು ತನ್ನೆದುರು ಹಾದುಹೋಗುವ ವಸ್ತುವಿನ ಚಲನೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವನ ವ್ಯಾಪ್ತಿಯ ವಿವಿಧೆಡೆ ಕೆಮರಾ ಅಳ ವಡಿಸಲಾಗಿದ್ದು, ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಉತ್ತಮವಾಗಿದೆ.