Advertisement
ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿ ಗ್ರಾಮದ ಯಜಮಾನ ಸಿದ್ದೇಗೌಡರ ಪತ್ನಿ ಚಿಕ್ಕಮ್ಮ (55)ಮೃತ ಪಟ್ಟ ದುರ್ದೈವಿ. ಎಂದಿನಂತೆ ಮುಂಜಾನೆ ಪತಿಯೊಂದಿಗೆ ಜಮೀನಿಗೆ ತೆರಳಿದ್ದ ಚಿಕ್ಕಮ್ಮ ಹುರುಳಿ ಕಾಳು ಬಿಡಿಸುತ್ತಿದ್ದರು.ರಾತ್ರಿಯೇ ಜಮೀನಿನೊಳಕ್ಕೆ ಸೇರಿಕೊಂಡಿದ್ದ ಆನೆ ಕಾಣಿಸಲಿಲ್ಲ.ಮುಂದೆ ಹೋಗುತ್ತಿದ್ದಂತೆ ಆನೆ ಕಾಣಿಸಿದೆ ಹೆದರಿಕೆಯಿಂದ ಕೂಗಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದರಾದರೂ ಘೀಳಿಟ್ಟ ಆನೆಯು ಪತಿಸಿದ್ದೇಗೌಡರ ಎದುರೇ ಚಿಕ್ಕಮ್ಮರನ್ನು ಸೊಂಡಲಿನಲಿನಿಂದ ಎತ್ತಿ 20 ಅಡಿಗಳಷ್ಟು ದೂರಕ್ಕೆ ಎಸೆದ ರಭಸಕ್ಕೆ ಚಿಕ್ಕಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಚಿಕ್ಕಮ್ಮರ ಕೂಗು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಕೂಗಾಟ ನಡೆಸಿ ಆನೆಯನ್ನು ಓಡಿಸಿದ್ದಾರೆ. ಆನೆ ಓಡಿ ಹೋಗಿ ಸುತ್ತಮುತ್ತಲಿನ ಗ್ರಾಮಗಳಲ್ಲೂ ದಾಂದಲೆ ನಡೆಸಿದ್ದು. ಎಚ್ ಓಡಿ ಬಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಳಿಕೆರೆಯಹೊನ್ನೇಗೌಡರ ಪುತ್ರ ರವಿ ಹಾಗೂ ದೊಡ್ಡಬೀಚನಹಳ್ಳಿ ಗ್ರಾಮದ ಮಹದೇವ ರವರ ಪುತ್ರ ರಂಜನ್ ಅಲಿಯಾಸ್ ರಂಜು ಎಂಬುವವರ ಮೇಲೆ ದಾಳಿ ನಡೆಸಿದೆ. ತೀವ್ರಗಾಯಗೊಂಡಿದ್ದ ಇಬ್ಬರನ್ನು ಮೈಸೂರಿನ ಆಸ್ಪತ್ರೆ ತೀವ್ರ ನಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ ಪಿ ಮಹೇಶ್. ಬಿಳಿಕೆರೆ ಠಾಣೆ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಗಳು ಧಾವಿಸಿ ಸಾವನ್ನಪ್ಪಿದ ಚಿಕ್ಕಮ್ಮರ ಶವನ್ನು ಬಿಳಿಕೆರೆ ಆಸ್ಪತ್ರೆಗೆ ಸಾಗಿಸಿದ್ದಾರೆ.
Related Articles
Advertisement
ಎರಡೂ ಕಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು. ಜನರು ಜಮೀನಿನತ್ತ ಬರದಂತೆ ಅರಣ್ಯಾಧಿಕಾರಿಗಳು ಮೈಕ್ ಮೂಲಕ ಸುತ್ತಮುತ್ತಲ ಗ್ರಾಮದಲ್ಲಿ ಪ್ರಚರ ಪಡಿಸುತ್ತಿದ್ದಾರೆ. ಸಾಕಾನೆಗಳ ಸಹಾಯದಿಂದ ಆನೆಯನ್ನು ಅರಬ್ಬಿತಿಟ್ಟು ಮೂಲಕ ನಾಗರಹೊಳೆ ಉದ್ಯಾನವನ ಸೇರಿಸಲಾಗುವುದೆಂದು ಅರಣ್ಯಾಧಿಕಾರಿಗಳು ಉದಯವಾಣಿಗೆ ತಿಳಿಸಿದರು.