Advertisement

ಮದ್ಯ ವ್ಯಸನಿ ತಾಯಿ ಮೇಲೆ ಪುತ್ರನಿಂದ ಹಲ್ಲೆ : ಪೆಟ್ಟು ಬಿದ್ದ ತಾಯಿ ಸಾವು

07:42 PM Mar 27, 2022 | Team Udayavani |

ಹುಣಸೂರು : ಮಕ್ಕಳಿಗೆ ತಿಳಿ ಹೇಳಬೇಕಾದ ತಾಯಿ ಮದ್ಯ ವ್ಯಸನಿಯಾಗಿದ್ದಲ್ಲದೆ ಮಕ್ಕಳಿಗೆ ಅಡುಗೆ ಮಾಡದಿದ್ದರಿಂದ ಕುಪಿತಗೊಂಡ ಮಗ ತಾಯಿಯ ಕಪಾಲಕ್ಕೆ ಹೊಡೆದಿದ್ದರಿಂದ ತೀವ್ರಗಾಯಗೊಂಡ ತಾಯಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಳಿಕೆರೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಹದೇವಸ್ವಾಮಿಯವರ ಪತ್ನಿ ಜಯಮ್ಮ(54) ಮೃತಪಟ್ಟಾಕೆ. ಇಬ್ಬರು ಮಕ್ಕಳಿದ್ದಾರೆ.

ಘಟನೆ ವಿವರ: ತಾಯಿ ಜಯಮ್ಮ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ಮಕ್ಕಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಶನಿವಾರ ಕೂಡ ಹಗಲು ವೇಳೆಯೇ ಜಯಮ್ಮ ಮದ್ಯ ಸೇವಿಸಿದ್ದರು. ಅಡುಗೆ ಸಹ ಮಾಡಿರಲಿಲ್ಲ, ಚಾಲಕನಾಗಿರುವ ಜಯಮ್ಮರ ಪುತ್ರ ಹರೀಶ್ ಮಧ್ಯಾಹ್ನ ಊಟಕ್ಕೆ ಬಂದ ವೇಳೆ ಅಡುಗೆ ಮಾಡಿರಲಿಲ್ಲ. ಕೋಪಗೊಂಡ ಹರೀಶ್ ತಾಯಿಯ ಕಪಾಳಕ್ಕೆ ಹೊಡೆದಿದ್ದರಿಂದ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಯಮ್ಮರ ಪುತ್ರಿ ತನ್ನ ಸಹೋದರ ತಾಯಿಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆಂದು ಬಿಳಿಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ರವಿಕುಮಾರ್ ಆರೋಪಿ ಹರೀಶನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಇದನ್ನೂ ಓದಿ : ದ್ವಿ ಚಕ್ರವಾಹನದಲ್ಲಿ ದನದ ಮಾಂಸ ಮಾರಾಟ : ಓರ್ವನ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next