ಹುಣಸೂರು: ತೆಂಗಿನ ಮರದಿಂದ ಬಿದ್ದು ಯುವ ರೈತನೊರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಹೊನ್ನಿಕುಪ್ಪೆಯಲ್ಲಿ ನಡೆದಿದೆ.
Advertisement
ಗ್ರಾಮದ ಸಣ್ಣೇಗೌಡರ ಪುತ್ರ, ಅವಿವಾಹಿತ ನವೀನ್‌ಕುಮಾರ್(28) ಮೃತ ದುರ್ದೈವಿ ರೈತ. ತೆಂಗಿನ ಮರದಿಂದ ಕಾಯಿ ಕೀಳುವ ವೇಳೆ ತೆಂಗಿನ ಗರಿ ಸಮೇತ ಕೆಳಗೆ ಬಿದ್ದಿದ್ದರಿಂದ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸು ದಾರರಿಗೆ ಒಪ್ಪಿಸಲಾಯಿತು. ಶುಕ್ರವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.