Advertisement

ಹುಣಸೂರು ತಾಲೂಕಿನಾದ್ಯಂತ ಮಂಜು ಮುಸುಕಿನ ವಾತಾವರಣ; ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಅನಾನುಕೂಲ

09:37 AM Nov 24, 2022 | Team Udayavani |

ಹುಣಸೂರು: ವಾಯುಭಾರ ಕುಸಿತದಿಂದ‌ ಉಂಟಾಗಿರುವ ಹವಾಮಾನ ವೈಪರಿತ್ಯದಿಂದಾಗಿ ಹುಣಸೂರು ತಾಲೂಕಿನಾದ್ಯಂತ ಬೆಳಗ್ಗೆ ಭಾರೀ ಚಳಿ ಇದೆ. ಎಲ್ಲೆಡೆ ಮಂಜು ಮುಸುಕಿನ ವಾತಾವರಣದ ಜೊತೆಗೆ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲು ಕಷ್ಟಪಡುವಂತಾಯಿತು. ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ತೊಂದರೆಯಾಗಿತ್ತು.

Advertisement

ಬುಧವಾರ ಸಂಜೆಯಿಂದಲೇ ಜಿಟಿ-ಜಿಟಿ ಮಳೆ ಆರಂಭವಾಯಿತಾದರೂ ರಾತ್ರಿ ಮಳೆಗೆ ಬಿಡುವು ನೀಡಿದ್ದ ಮಳೆರಾಯ ಮುಂಜಾನೆ 4 ಗಂಟೆಯಿಂದ ಮತ್ತೆ ಮಳೆ ಆರಂಭವಾಯಿತು. ಮಳೆಯ ಜೊತೆಗೆ ಭಾರಿ ಮಂಜು ಬೀಳುತ್ತಿದ್ದರಿಂದ ತಾಲೂಕಿನಾದ್ಯಂತ ಬೆಳಗ್ಗೆ 7 ಗಂಟೆಯಾಗಿದ್ದರೂ ಕತ್ತಲು ಆವರಿಸಿತ್ತು. ಅದರ ಜೊತೆಗೆ ಮೈ ಕೊರೆಯುವ ಚಳಿಯಿಂದಾಗಿ ಜನರ ದೈನಂದಿನ ಕಾರ್ಯಗಳಿಗೆ ತೆರಳಲು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next