Advertisement

ಹುಣಸೂರು: ರೌಡಿ ಶೀಟರ್ ತನ್ವೀರ್ ಬೇಗ್ ಗಡಿಪಾರು

09:50 PM Mar 30, 2023 | Team Udayavani |

ಹುಣಸೂರು: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹುಣಸೂರಿನ ಬಜಾರ್ ರಸ್ತೆಯ ರೌಡಿ ಶೀಟರ್ ತನ್ವೀರ್ ಬೇಗ್‌ನನ್ನು ಮೂರು ತಿಂಗಳ ಕಾಲ ಬೆಳಗಾವಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

Advertisement

ನಗರ ಠಾಣೆ ವ್ಯಾಪ್ತಿಯಲ್ಲಿ ಈತನ ವಿರುದ್ದ ಕೊಲೆ, ದರೋಡೆಯಂತಹ ಪ್ರಕರಣ ದಾಖಲಾಗಿರುವುದರಿಂದ ಚುನಾವಣೆ ವೇಳೆಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಸಾರ್ವಜನಿಕರ ನೆಮ್ಮದಿ, ಶಾಂತಿ ಭಂಗ ಉಂಟುಮಾಡುವ ಸಂಭವದ ಹಿನ್ನೆಲೆಯಲ್ಲಿ ಎಸ್.ಪಿ. ಸೀಮಾ ಲಾಟ್ಕರ್, ಅಡಿಷನಲ್ ಎಸ್.ಪಿ.ಡಾ.ನಂದಿನಿಯವರ ನಿರ್ದೇಶನದಂತೆ ಡಿವೈಎಸ್‌ಪಿ ಮಹೇಶ್ ಎಂ.ಕೆ.ರ ಮಾರ್ಗದರ್ಶನದಲ್ಲಿ ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಂ.ದೇವೇಂದ್ರರವರು ರೌಡಿ ತನ್ವೀರ್‌ಬೇಗ್‌ನನ್ನು ಗಡಿಪಾರು ಮಾಡುವಂತೆ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿ, ವಾದ ಮತ್ತು ವಿವಾದವನ್ನು ಆಲಿಸಿದ ಉಪವಿಭಾಗಾಧಿಕಾರಿ ರುಚಿ ಬಿಂದಾಲ್‌ರವರು ರೌಡಿಶೀಟರ್ ತನ್ವಿರ್‌ಬೇಗ್‌ನನ್ನು 2023 ರ ಜೂನ್ 22 ರವರೆಗೆ ಮೈಸೂರು ಜಿಲ್ಲೆಯಿಂದ ಗಡಿಪಾರುಮಾಡಿ, ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ನಿತ್ಯ ಹಾಜರಾತಿ ಸಲ್ಲಿಸಬೇಕೆಂದು ಆದೇಶಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next