ಹುಣಸೂರು: ನಗರದ ಹುಣಸೂರು ಗ್ಯಾಸ್ ಎದುರಿನ ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್-ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಣಸೂರು ತಾಲೂಕಿನ ಒಂಟೆಪಾಳ್ಯ ಬೋರೆ ಬಡಾವಣೆ ನಿವಾಸಿ ಛಾಯಾಗ್ರಾಹಕ ಸನ್ನಿಧಿ ಮಂಜುನಾಥ್(34) ಮೃತ ದುರ್ದೈವಿ. ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು.
ಸ್ಕೂಟರ್‌ನಲ್ಲಿ ಎ.ಪಿ.ಎಂಸಿ. ಕಡೆ ನಗರಕ್ಕೆ ಬರುತ್ತಿದ್ದ ವೇಳೆ ಪಿರಿಯಾಪಟ್ಟಣ ಡಿಪೋಗೆ ಸೇರಿದ ಬಸ್ ಹುಣಸೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಮುಖಾಮುಖಿ ಢಿಕ್ಕಿ ಸಂಭವಿಸಿ ಸ್ಕೂಟರ್ ಸಹಿತ ಚಕ್ರದಡಿಗೆ ಸಿಲುಕಿಕೊಂಡು ತೀವ್ರಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತವಾಗುತ್ತಿದ್ದಂತೆ ಚಾಲಕ-ನಿರ್ವಾಹಕ ಪರಾರಿಯಾಗಿದ್ದಾರೆ.
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ವೃತದೇಹವನ್ನು ಸಾಗಿಸಿದ್ದಾರೆ, ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೊಪ್ಪಿಸಲಾಗಿದೆ, ಶನಿವಾರ ವಡೆಯರ ಹೊಸಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Related Articles
ಪರಿಹಾರ
ಡಿಪೋ ಮ್ಯಾನೆಜರ್ ಸುಬ್ರಮಣ್ಯ ಕುಟುಂಬಕ್ಕೆ ತಾತ್ಕಾಲಿಕವಾಗಿ 25 ಸಾವಿರ ರೂ ತಾತ್ಕಾಲಿಕ ಪರಿಹಾರ ನೀಡಿದರು.
ಸಂತಾಪ; ಹುಣಸೂರು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕ್ಸೇವಿಯರ್ ಹಾಗೂ ಪದಾಕಾರಿಗಳು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.