Advertisement
ತಾಲೂಕಿನ ಗಾವಡಗೆರೆ ಸುತ್ತಮುತ್ತಲಿನಲ್ಲಿ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ಕೊಂದು ತಿಂದು ಹಾಕಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಸುಮಾರು 9 ವರ್ಷದ ಚಿರತೆ ಕೊನೆಗೂ ಸಣ್ಣಸ್ವಾಮಿ ನಾಯಕರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಬಂಧಿಯಾಗಿದೆ.
Related Articles
Advertisement
ಚಿಪ್ ಅಳವಡಿಕೆಗೆ ಚಿಂತನೆ:
ಸೆರೆ ಸಿಕ್ಕಿರುವ ಚಿರತೆಗೆ ಮೈಕ್ರೋ ಚಿಪ್ ಅಳವಡಿಸಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮದ್ ಪೈಯಾಜ್ ಉದ್ದೀನ್ ತಿಳಿಸಿದರು.