Advertisement

ಹುಣಸೂರು: ಸಾಲ ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

09:08 AM Aug 03, 2022 | Team Udayavani |

ಹುಣಸೂರು: ಸಾಕಷ್ಟು ಸಾಲ ಮಾಡಿಕೊಂಡಿದ್ದ ರೈತರೊಬ್ಬರು ಕ್ರಿಮಿನಾಶಕದ ಕಾಳು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಮೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ರಾಮೇನ ಹಳ್ಳಿಯ ಈಶ್ವರ್(58) ಸಾವನ್ನಪ್ಪಿದವರು.

ಘಟನೆ ವಿವರ: ರೈತ ಈಶ್ವರ್ ರವರಿಗೆ ಒಟ್ಟು 2.5 ಎಕರೆ ಜಮೀನಿದ್ದು, ಕೃಷಿಗಾಗಿ ಹುಣಸೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 3 ಲಕ್ಷ ಹಾಗೂ ಕೋಷಮಟ್ಟಂ ಫೈನಾನ್ಸ್ ನಲ್ಲಿ 200 ಗ್ರಾಂ ಒಡವೆಯನ್ನಿಟ್ಟು 5 ಲಕ್ಷ ರೂ. ಸಾಲ ಪಡೆದಿದ್ದರಲ್ಲದೆ ಸುಮಾರು ಎರಡು ಲಕ್ಷ ರೂ. ನಷ್ಟು ಕೈ ಸಾಲ ಮಾಡಿಕೊಂಡಿದ್ದರು. ಕೃಷಿ ಕೈ ಕೊಟ್ಟಿದ್ದು, ಸಾಲ ತೀರಿಸಲಾಗದೆ ಬವಣೆ ಪಡುತ್ತಿದ್ದರು. ಇದರಿಂದ ಹತಾಶೆಗೊಳಗಾದ ಇವರು ಆಗಸ್ಟ್ 1 ರಂದು ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ವ್ಯವಸಾಯಕ್ಕೆಂದು ತಂದಿಟ್ಟಿದ್ದ ಕ್ರಿಮಿನಾಶಕ ಕಾಳು ಮಾತ್ರೆಯನ್ನು ಸೇವಿಸಿ ಅಸ್ಪಸ್ಥರಾಗಿದ್ದು, ಬಳಿಕ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸಂಬಂದ ಮೃತರ ಬಾವ ಮೈದುನ ಉಮೇಶ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next