ಹುಣಸೂರು: ನಗರ ಸೇರಿದಂತೆ ತಾಲೂಕಿನ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದು, ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.
Advertisement
ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದರೆ, ನಾಗರಹೊಳೆ ಉದ್ಯಾನದ ಡಿ.ಬಿ.ಕುಪ್ಪೆ, ಕಾಕನಕೋಟೆ, ಹುಣಸೂರು, ವೀರನಹೊಸಹಳ್ಳಿ ವಲಯದಲ್ಲೂ ಸಾದಾರಣ ಮಳೆಯಾಗಿದೆ. ಆನೆ ಚೌಕೂರುವಲಯದಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಸಹಿತ ಮಳೆಯಾಗಿದೆ.
ನಗರದ ಹಾರಂಗಿ ಕ್ವಾಟ್ರಸ್ ನಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದು ಭಸ್ಮವಾಗಿದೆ.