ಹುಣಸೂರು: ಸಾಕುಪ್ರಾಣಿ ಹಾಗೂ ಜಾನುವಾರುಗಳನ್ನು ಕೊಂದು ತಿಂದು ಹಾಕುತ್ತಿದ್ದ ಸುಮಾರು 2 ವರ್ಷದ ಗಂಡು ಚಿರತೆ ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ.
ಹುಣಸೂರು ತಾಲೂಕಿನ ಹರಳಹಳ್ಳಿ ಗ್ರಾಮದ ರೈತ ಪುಟ್ಟಸ್ವಾಮಿ ಗೌಡ ಅವರ ಜಮೀನಿನಲ್ಲಿ ಬೋನಿನಲ್ಲಿರಿಸಿದ್ದ ನಾಯಿಯನ್ನು ಭೇಟೆಯಾಡಲು ಹೋಗಿ ಬೋನಿನಲ್ಲಿ ಸೆರೆಯಾಗಿದೆ.
ಕೆಲವು ದಿನಗಳಿಂದ ಬೀದಿನಾಯಿಯನ್ನು ಕೊಂದು ಹಸಿವು ನೀಗಿಸಿಕೊಂಡಿದ್ದ ಚಿರತೆ ಎರಡು ದಿನದ ಹಿಂದೆ ಹಸುವನ್ನು ಕೊಂದು ಹಾಕಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು.
ಆರ್.ಎಫ್.ಓ. ನಂದ ಕುಮಾರ್ ಪರಿಶೀಲನೆ ನಡೆಸಿದ್ದರು. ಅರಣ್ಯ ಸಿಬ್ಬಂದಿಗಳು ಚಿರತೆ ಸೆರೆಗೆ ಜಮೀನೊಂದರಲ್ಲಿ ಬೋನ್ ಒಳಗೆ ನಾಯಿ ಇಟ್ಟಿದ್ದು, ಆ ನಾಯಿ ಆಸೆಯಿಂದ ಬೋನ್ ಒಳಹೊಕ್ಕಿದ್ದ ಚಿರತೆ ಬೋನಿನಲ್ಲಿ ಬಂಧಿಯಾಯಿತು.
Related Articles
ಸೆರೆ ಸಿಕ್ಕ ಚಿರತೆಯನ್ನು ಅಂತರ ಸಂತೆ ವಲಯದಲ್ಲಿ ಬಂಧ ಮುಕ್ತ ಗೊಳಿಸಲಾಗುವುದು ಎಂದು ಆರ್.ಎಫ್.ಓ. ಉದಯವಾಣಿಗೆ ತಿಳಿಸಿದರು.