Advertisement

ಪತ್ರಕರ್ತರಿಗೆ ಕ್ರೀಡೆ, ಮನರಂಜನೆ ಅವಶ್ಯಕ: ಡಿ.ವೈ.ಎಸ್.ಪಿ. ರವಿಪ್ರಸಾದ್

10:38 AM Jul 04, 2022 | Team Udayavani |

ಹುಣಸೂರು: ಸದಾ ಓತ್ತಡದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಕ್ರೀಡೆ, ಮನರಂಜನೆ ಅವಶ್ಯಕ, ಹುಣಸೂರಿನಲ್ಲಿ ಪತ್ರಿಕಾರಂಗ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಡಿವೈಎಸ್‌ಪಿ ರವಿಪ್ರಸಾದ್ ಹೇಳಿದರು.

Advertisement

ಅವರು ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರು ಹಾಗೂ ಅವರ ಕುಂಟುಂಬಸ್ಥರು, ಪತ್ರಿಕಾ ವಿತರಿಕರಿಗಾಗಿ ನಗರಸಭಾ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾ ಕೂಟವನ್ನು ಗುಂಡು ಎಸೆಯುವ ಮೂಲಕ ಉಧ್ಘಾಟಿಸಿ, ಮಾತನಡಿದರು.

ಇಲ್ಲಿನ ಪತ್ರಕರ್ತರು ತಾಲೂಕಿನ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯ ಗಳಿಸುವಲ್ಲಿ ಹಾಗೂ ಆ ನಂತರದಲ್ಲಿಯೂ  ಪತ್ರಿಕೆಗಳು ದೇಶದ ಪ್ರಗತಿಗೆ, ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವುದರಿಂದಲೇ ದೇಶ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ತಹಶೀಲ್ದಾರ್ ಡಾ.ಅಶೋಕ್, ನಗರಸಭೆ ಪೌರಾಯುಕ್ತ ರವಿಕುಮಾರ್ ಮಾತನಾಡಿ ಪತ್ರಿಕೆಗಳು ಸ್ಥಳೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ಪ್ರಗತಿಪರ ರೈತ ಸತೀಶ್‌ಪಾಪಣ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಕಾರ್ಯದರ್ಶಿ ಶಂಕರ್, ಮಾತನಾಡಿದರು.

Advertisement

ಪತ್ರಕರ್ತರಾದ ಸಚ್ಚಿತ್, ಗಜೇಂದ್ರ, ಚಲುವರಾಜು ಹನಗೋಡುನಟರಾಜ್ ಮತ್ತಿತರರು ವೇದಿಕೆಯಲ್ಲಿದ್ದರು. ಮಳೆಯ ನಡುವೆಯೇ ಹಲವಾರು ಕ್ರೀಡಾ ಸ್ಪರ್ಧೆಗಳು ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next