Advertisement

ಜಮೀನಿನ ಬೇಲಿಗೆ ಹಾಕಿದ್ದ ಉರುಳಿಗೆ ಸಿಕ್ಕಿಬಿದ್ದ ಹುಲಿ; ಕೊಳೆತ ಸ್ಥಿತಿಯಲ್ಲಿ ಪತ್ತೆ

11:57 AM Nov 13, 2022 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಜಮೀನಿನ ಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಕ್ಕಿಬಿದ್ದು ಹುಲಿ ಮೃತಪಟ್ಟಿದೆ.

Advertisement

ಸುಮಾರು 12 ವರ್ಷದ ಹೆಣ್ಣು ಹುಲಿ ಇದಾಗಿದ್ದು, 8 -10 ದಿನಗಳ ಹಿಂದೆ ಹುಲಿ ಉರುಳಿಗೆ ಸಿಲುಕಿ ಮೃತ ಪಟ್ಟಿದೆ. ಹುಲಿಯ ತಲೆ ಮತ್ತು ದೇಹದ ಕೆಲವು ಭಾಗ ಮಾತ್ರ ಉಳಿದಿದ್ದು, ಭಾಗಶಃ ಕೊಳೆತು ಹೋಗಿರುವ ಸ್ವಲ್ಪ ಭಾಗದ ದೇಹವನ್ನು ಅರಣ್ಯಕ್ಕೆ ತಂದು ದಹನ ಮಾಡಲಾಗಿದೆ.

ಘಟನೆ ವಿವರ: ಎಚ್.ಡಿ. ಕೋಟೆ ತಾಲೂಕಿನ ತಾರಕ ಗ್ರಾಮದಿಂದ ದಮ್ಮನಕಟ್ಟೆಗೆ ಹೋಗುವ ರಸ್ತೆಯಿಂದ ಸುಮಾರು 300 ಮೀಟರ್ ದೂರದಲ್ಲಿ ಕಾಡಿನಂಚಿನ ಜಮೀನನ ನಡುವೆ ಇದ್ದ ಹಳ್ಳದಲ್ಲಿ ಕೊಳೆತು ಹೋಗಿರುವ ಹುಲಿಯ ಶವದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಅಂತರ ಸಂತೆ ಗ್ರಾ.‌ಪಂ. ಅಧ್ಯಕ್ಷ ಸುಬ್ರಮಣ್ಯ ಜಮೀನೊಂದರಲ್ಲಿ ಹುಲಿ ದೇಹ ಕೊಳೆತು ಹೋಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅಂತರಸಂತೆ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ಸಿದ್ದರಾಜು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದು, ಜಮೀನಿನಲ್ಲಿ ಬೆಳೆ ಇಲ್ಲದಿರುವುದರಿಂದ ಜಮೀನಿಗೆ ಬಂದಿರಲಿಲ್ಲ. ಹಾಗಾಗಿ ತಮಗೆ ಈ ಬಗ್ಗೆ ಗೊತ್ತಿಲ್ಲ, ಜಮೀನಿನ ಬೇಲಿಗೆ ಉರುಳು ಅಳವಡಿಸಿರುವುದು ಕೂಡ ತಮಗೆ ಗೊತ್ತಿಲ್ಲ ಎಂದು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಮೃತಪಟ್ಟಿರುವ ಹುಲಿ ತನ್ನ ಮೂರು ಮರಿಗಳೊಂದಿಗೆ ಆಗಿಂದಾಗ್ಗೆ ಕಾಡಿನಿಂದ ಆಚೆಗೆ ಬರುತ್ತಿದ್ದನ್ನು ಅಕ್ಕ ಪಕ್ಕದ ಜಮೀನಿನ ಮಾಲೀಕರು ನೋಡಿದ್ದಾರೆ. ಗ್ರಾಮಸ್ಥರು ಕೊಟ್ಟ ಮನವಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ, ನಾಲ್ಕಕ್ಕೂ ಹೆಚ್ಚು ಬಾರಿ ಹುಲಿ ಪತ್ತೆಗೆ ಕೂಂಬಿಂಗ್ ನಡೆಸಿದ್ದರು. ಆದರೇ ಏನೂ ಪ್ರಯೋಜನ ಆಗಿರಲಿಲ್ಲ. ಆದರೆ ಅಳವಡಿಸಿದ್ದ ಕ್ಯಾಮರಾಗಳಲ್ಲಿ ಹುಲಿ ಓಡಾಡಿದ್ದ ಚಿತ್ರಗಳು ಕಂಡಿದ್ದವು.

Advertisement

ಈ ಹೆಣ್ಣು ಹುಲಿ ಎರಡು ಬಾರಿ ಮೂರು ಮರಿಗಳಂತೆ ತಲಾ ಎರಡು ಬಾರಿ ಹಾಕಿದ್ದನ್ನು ನೋಡಿದ್ದೆವು ಎಂದು ವನ್ಯ ಜೀವಿ ಪ್ರೇಮಿ ಸತೀಶ್ ಉದಯವಾಣಿಗೆ ತಿಳಿಸಿದ್ದಾರೆ.

ವನ್ಯ ಜೀವಿ ಪರಿಪಾಲಕಿ ಕೃತಿಕಾ ಆಲನಹಳ್ಳಿ, ಡಿಸಿಎಪ್ ಹರ್ಷಕುಮಾರ್ ನರಗುಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ, ಹುಣಸೂರು ವನ್ಯ ಜೀವಿ ವಲಯದ ಡಾ. ರಮೇಶ್, ಎಚ್.ಡಿ.ಕೋಟೆ ತಾಲೂಕಿನ ಪಶು ಇಲಾಖೆಯ ವೈದ್ಯ ಡಾ. ಪ್ರಸನ್ನ, ಅರಣ್ಯಾಧಿಕಾರಿ ಸಿದ್ದರಾಜು(ಅಂತರಸಂತೆ), ಮಧು (ಡಿ.ಬಿ.ಕುಪ್ಪೆ), ಹರ್ಷ ಗೌಡ(ಮೇಟಿಕುಪ್ಪೆ) ಮತ್ತು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next