Advertisement

Hunsur: ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಉಪನ್ಯಾಸಕ ಗಿರೀಶ್‌ ಆಯ್ಕೆ

10:49 AM Aug 28, 2024 | Team Udayavani |

ಹುಣಸೂರು: ನಗರದ ಬಾಲಕಿಯರ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಜೀವಶಾಸ್ತ್ರ ವಿಷಯ ಉಪನ್ಯಾಸಕ ಎಚ್‌. ಎನ್‌.ಗಿರೀಶ್‌ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಪಿಯು ವಿಭಾಗದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಥಮ ಉಪನ್ಯಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ, ಹಾಜರಾತಿ, ದಾಖಲಾತಿಯಲ್ಲೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವಲ್ಲಿಯೂ ಗಿರೀಶ್‌ರ ಶ್ರಮ ಅಪಾರವಾಗಿದೆ. ಕಾಲೇಜು ಶಿಕ್ಷಣ ಇಲಾಖೆಯು ಸಮುದಾಯ, ಶೈಕ್ಷಣಿಕ ಪ್ರಗತಿ ಸೇರಿದಂತೆ 5 ಹಂತಗಳಲ್ಲಿ ನಡೆಯುವ ಮೌಲ್ಯ ಮಾಪನದಲ್ಲಿ ಎಚ್‌.ಎನ್‌.ಗಿರೀಶ್‌ ಪಾಸಾಗಿದ್ದಾರೆ.

ಮೂಲತಃ ಹುಣಸೂರು ತಾಲೂಕಿನ ಹಿಂಡಗುಡ್ಲು ಗ್ರಾಮದವರಾದ ಎಚ್‌.ಎನ್‌.ಗಿರೀಶ್‌ ಅವರು ಕಳೆದ 30 ವರ್ಷಗಳಿಂದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಕಾರ್ಯತತ್ಪರತೆ ಪರಿಗಣಿಸಿದ ಶಿಕ್ಷಣ ಇಲಾಖೆಯು 2023ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿದ್ದನ್ನು ಸ್ಮರಿಸಬಹುದು. ಎಚ್‌.ಎನ್‌.ಗಿರೀಶ್‌ರ ಸೇವೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತಾಲೂಕಿಗೆ ಹೆಮ್ಮೆ ತಂದಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕಎಚ್‌.ಪಿ.ಮಂಜುನಾಥ್‌, ಕಾಲೇಜಿನ ಪ್ರಾಚಾರ್ಯ ರಾಮೇಗೌಡ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next