ಹುಣಸೂರು: ರಾಜ್ಯದ ಗಮನ ಸೆಳೆದಿದ್ದ ಹುಣಸೂರು ಹನುಮ ಜಯಂತಿ ಶೋಭಾ ಯಾತ್ರೆಗೆ ನಗರದ ರಂಗನಾಥ ಬಡಾವಣೆಯಲ್ಲಿ ಹನುಮಂತನ ಉತ್ಸವ ಮೂರ್ತಿಗೆ ಗಾವಡಗೆರೆ ನಟರಾಜಸ್ವಾಮೀಜಿ, ಶಾಸಕ ಹೆಚ್.ಪಿ.ಮಂಜುನಾಥ್. ಜೆಡಿಎಸ್ ನಾಯಕ ಜಿ.ಡಿ.ಹರೀಶ್ ಗೌಡ, ಅರ್ಪಿತಾ ಪ್ರತಾಪಸಿಂಹ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಗೈಯುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಅಲಂಕೃತ ವಾಹನಗಳಲ್ಲಿ ಹನುಮಂತನ ಕಂಚಿನ ಉತ್ಸವ ಮೂರ್ತಿ. ದತ್ತಾತ್ರೇಯ. ಶ್ರೀರಾಮ ಲಕ್ಷ್ಮಣ. ಹನುಮಂತನ ಉತ್ಸವ ಮೂರ್ತಿಯನ್ನು ಕಲ್ಕುಣಿಕೆ ಬಡಾವಣೆ ಮೂಲಕ ನಗರ ಪ್ರವೇಶಿಸಿತು.
ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ. ಜೈ ಶ್ರೀರಾಮ್ … ಹನುಮಾನ್ ಕೀ ಜೈ ಎಂಬಿತ್ಯಾದಿ ಘೋಷಣೆ ಮೊಳಗಿಸಿದರು.ಯುವಕರು ಕೈಯಲ್ಲಿ ಕೇಸರಿ ಬಾವುಟ ಹಿಡಿದು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಗರದ ವಿವಧ ವೃತ್ತಗಳ್ಲಿ ಸಂಘ ಸಂಸ್ಥೆಗಳವರು,ದಾನಿಗಳು ಮಜ್ಜಿಗೆ, ಪಾನಕ,ಜ್ಯೂಸ್ ಚಿತ್ರಾನ್ನ , ಮೊಸರನ್ನ ವಿತರಿಸಿದರು. ಸೇತುವೆ,ಕೋಟೆ ಸರ್ಕಲ್, ಬಜಾರ್ ರಸ್ತೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಜ್ಯೂಸ್ ಪಾನಕ ವಿತರಿಸಿದರು.