Advertisement
ಬಿಳಿಕೆರೆ ಹೋಬಳಿಯ ಕೊಳಗಟ್ಟ ಗ್ರಾಮದ ಕುಮಾರ್‌ರಿಗೆ ಸೇರಿದ ಮೇಕೆಗಳು ಇವಾಗಿದ್ದು, ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟದ್ದ ಮೇಕೆಗಳ ಮೇಲೆ ಚಿರತೆಯು ದಾಳಿ ನಡೆಸಿದೆ, ಈ ವೇಳೆ ಮೇಕೆಗಳು ಜೋರಾಗಿ ಚೀರಾಟ ನಡೆಸಿವೆ. ಅಕ್ಕಪಕ್ಕದಲ್ಲಿದಲ್ಲಿದ್ದ ದನಗಾಹಿಗಳು ಜೋರಾಗಿ ಕೂಗಿಕೊಂಡಿದ್ದರಿಂದ ಮೇಕೆಗಳನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ಹತ್ತಿರ ಬಂದು ನೋಡುವಷ್ಟರಲ್ಲಿ ಮೇಕೆಗಳು ಸಾವನ್ನಪ್ಪಿದ್ದವು.ಕೊಳಗಟ್ಟ ಗ್ರಾಮವು ಅರಬ್ಬಿತಿಟ್ಟು ರಕ್ಷಿತಾರಣ್ಯದ ಪಕ್ಕದಲ್ಲೇ ಇದ್ದು, ಕೊಳಗಟ್ಟ, ಕುಪ್ಪೆ, ರಂಗಯ್ಯನಕೊಪ್ಪಲು, ಮಧುಗಿರಿಕೊಪ್ಪಲು ಭಾಗದಲ್ಲಿ ಚಿರತೆಗಳ ಹಾವಳಿ ಸಾಕಷ್ಟಿದ್ದು, ಸಾಕುಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಮಾಹಿತಿ ನೀಡಿದ ಕೂಡಲೆ ಬೋನಿಟ್ಟು ಚಿರತೆಗಳನ್ನು ಬಂಧಿಸುವಂತೆ ರೈತರು ಮನವಿ ಮಾಡಿದ್ದಾರೆ.