Advertisement

Hunsur: ತಿಳುವಳಿಕೆ ಹೇಳಿದ ಎಎಸ್‌ಐ ಮೇಲೆ ಪಾನಮತ್ತನಿಂದ ಹಲ್ಲೆಗೆ ಯತ್ನ; ಆರೋಪಿ ಬಂಧನ

07:26 PM Aug 27, 2024 | Team Udayavani |

ಹುಣಸೂರು: ಪಾನಮತ್ತನಾಗಿದ್ದವನಿಗೆ ತಿಳುವಳಿಕೆ ಹೇಳಿದ ಎ.ಎಸ್.ಐ.ಮೇಲೆ ಹರಿಹಾಯ್ದಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದಾತನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಗರದ ಬಜಾರ್ ರಸ್ತೆಯಲ್ಲಿ ಆ.27ರ ಮಂಗಳವಾರ ನಡೆದಿದೆ.

Advertisement

ಬಜಾರ್ ರಸ್ತೆಯ ಬಾಳೆಹಣ್ಣು ವ್ಯಾಪಾರಿ ಮಲ್ಲೇಶ್ ಬಂಧನಕ್ಕೊಳಗಾದಾತ.

ಈತನ ವಿರುದ್ದ ಎಎಸ್‌ಐ ನಂಜೇಶ್ ಅವರು ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಲು ಮುಂದಾಗಿದ್ದರ ವಿರುದ್ದ ದೂರು ದಾಖಲಿಸಿದ್ದಾರೆ.

content-img

ಪಾನಮತ್ತನಾಗಿದ್ದ ಮಲ್ಲೇಶ್ ಆ.26ರ ಸೋಮವಾರ ರಾತ್ರಿ 8ರ ವೇಳೆಗೆ ಬಜಾರ್ ರಸ್ತೆಯ ಲಕ್ಷ್ಮೀ ವಿಲಾಸ್ ವೃತ್ತದ ಬಳಿಯ ತನ್ನ ಅಂಗಡಿಯ ಎದುರಿನಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿತ್ತು.

Advertisement

ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಎಎಸ್‌ಐ ನಂಜೇಶ್ ಹಾಗೂ ಮುಖ್ಯ ಪೇದೆ ಪ್ರಕಾಶ್ ತಿಳುವಳಿಕೆ ಹೇಳಿದ್ದಾರೆ. ಈ ವೇಳೆ ಎಎಸ್‌ಐ ನಂಜೇಶ್ ಹಾಗೂ ಮಲ್ಲೇಶ್ ನಡುವೆ ಮಾತಿನ ಚಕಮಕಿ ನಡೆದು ನಂಜೇಶ್‌ ಅವರ ಮೇಲೆ ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೂಗಾಟ ನಡೆಸಿದ್ದಾನೆ.

ನಂಜೇಶ್‌ ಅವರ ದೂರಿನ ಮೇರೆಗೆ ಎ.ಐ. ಜಮೀರ್ ಅಹಮದ್ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆ ಆರೋಪಿನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.