ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿ ಶುಕ್ರವಾರ ಬೆಳಂಬೆಳಗ್ಗೆ ರಸ್ತೆ ಬದಿಯಲ್ಲಿ ಜಿಂಕೆ ಶವ ಪತ್ತೆಯಾದ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆಸಿದವರ ಪತ್ತೆಗೆ ಚಾಣಾಕ್ಷ ರಾಣಾ ನನ್ನು ಕರೆಸಲಾಗಿದೆ.
ಶುಕ್ರವಾರ ಹುಣಸೂರು-ನಾಗರಹೊಳೆ ಮುಖ್ಯ ರಸ್ತೆಯ ಭರತವಾಡಿ ಗ್ರಾಮದ ಬಳಿ ಜಿಂಕೆ ಶವ ಪತ್ತೆಯಾಗಿತ್ತು. ಗ್ರಾಮಸ್ಥರು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರಾದರೂ ಸಚಿವರ ಭೇಟಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಯಾರೂ ಬಂದಿರಲ್ಲ. ಜಿಂಕೆಗೆಗುಂಡೇಟು ತಗುಲಿರುವ ಶಂಕೆಯಿಂದ ಗ್ರಾಮಸ್ಥರು ಮೈಸೂರಿನ ಅರಣ್ಯ ಭವನಕ್ಕೆ ಮಾಹಿತಿ ನೀಡಿದ್ದರು.
ಎಚ್ಚೆತ್ತ ಅರಣ್ಯ ಸಂಚಾರಿ ದಳದ ಅಧಿಕಾರಿ ವಿವೇಕ್ ನೇತೃತ್ವದ ಸಿಬ್ಬಂದಿಗಳ ತಂಡ ಆಗಮಿಸಿ ಜಿಂಕೆಯ ಶವವನ್ನು ವಶಕ್ಕೆ ಪಡೆದು ಹತ್ಯೆ ಶಂಕೆಯಿಂದ ಬಂಡೀಪುರದ ಚಾಣಾಕ್ಷ ರಾಣಾ ನನ್ನು ಕರೆಸಲಾಗಿದೆ.
ಕಾರ್ಯಾಚರಣೆಗಿಳಿದ ರಾಣಾ ಎರಡು ಕಿ.ಮೀ.ದೂರದ ಅರಣ್ಯ ಇಲಾಖೆ ಸಿಬ್ಬಂದಿ ಮನೆ ಬಳಿಗೆ ತೆರಳಿತ್ತಲ್ಲದೆ. ಜಾಗಬಿಟ್ಟು ಕದಲಲಿಲ್ಲ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ, ಮನೆಯಲ್ಲಿ ಕೃತ್ಯಕ್ಕೆ ಬಳಸಿರಬಹುದಾದ ಬಂದೂಕು, ಆಯುಧಕ್ಕೆ ಜಾಲಾಡಿದರೂ ಪತ್ತೆಯಾಗಿಲ್ಲ. ಮನೆಯಲ್ಲಿ ರಕ್ತದ ಕಲೆ ಇದ್ದ ಬ್ಯಾಗ್ ಮತ್ತು ಮಾಂಸದ ಅಡುಗೆ ಮಾಡಿದ್ದ ಪಾತ್ರೆ, ಸಾಂಬರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದೇ ವೇಳೆ ಸಿಬ್ಬಂದಿಯ ಪುತ್ರರೊಬ್ಬರು ಕಾಲು ಮತ್ತು ಮುಖಕ್ಕೆ ಗಾಯಮಾಡಿ ಪತ್ತೆ ಕೊಂಡಿರುವುದನ್ನು ಮಾಡಿದ್ದಾರೆ.
ಗ್ರಾಮಸ್ಥರ ಅನುಮಾನ: ಇತ್ತೀಚೆಗೆ ನಡೆದ ಚುನಾವಣೆ ಸಂಬಂಧ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಬಳಿ ಇದಗದ ಬಂದೂಕನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಹಾಗಾದರೆ ಜಿಂಕೆಗೆ ಗುಂಡು ಹಾರಿಸಿರುವವರ ಪತ್ತೆ ಮಾಡಲು ಒತ್ತಾಯಿಸಿದ್ದು, ರೈತರ ಬಳಿ ಇದ್ದ ಬಂದೂಕು ಪೊಲೀಸ್ ಇಲಾಖೆ ವಶದಲ್ಲಿದೆ ಹಾಗಾದರೆ ಗುಂಡು ಹಾರಿಸಿದವರು ಯಾರು ಎಂಬ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.
ಶವ ಪರೀಕ್ಷೆ: ಶುಕ್ರವಾರ ರಾತ್ರಿಯಾಗಿದ್ದರಿಂದ ಜಿಂಕೆಯ ಶವವನ್ನು ಅರಣ್ಯ ಇಲಾಖೆ ವೀರನಹೊಸಹಳ್ಳಿ ಕಚೇರಿ ಬಳಿಗೆ ತರಲಾಗಿದ್ದು, ಶನಿವಾರ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂದ ನಂತರ ಜಿಂಕೆಯ ಮರಣೋತ್ತರ ಪರೀಕ್ಷೆಯಿಂದಷ್ಟೆ ಜಿಂಕೆಗೆ ಇಲಾಖೆ ಬಂದೂಕಿನ ಗುಂಡು ತಗುಲಿದೆಯೋ ಅಥವಾ ಭೇಟೆಗಾರರು ಹತ್ಯೆ ನಡೆಸಿದ್ದಾರೋ ಅಥವಾ ಕಾಡಂಚಿನವರು ಹೊಂದಿರುವ ಅಕ್ರಮ ಬಂದೂಕಿನಿಂದ ಗುಂಡು ಹೊಡೆಯಲಾಗಿದೆಯೋ ಎಂಬುದು ಪತ್ತೆಯಾಗಬೇಕಿದೆ.
ಎಲ್ಲವೂ ಚಾಣಾಕ್ಷ ರಾಣಾನ ತಪಾಸಣೆಯಿಂದಷ್ಟೆ ಸತ್ಯ ಹೊರಬರಬೇಕಿದೆ.